ದಾವಣಗೆರೆ, ಜ. 25- ಇತ್ತೀಚೆಗೆ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮಹಿಳೆಯರ ಖೋ-ಖೋ ಪಂದ್ಯಾವಳಿಯಲ್ಲಿ ಜಿ. ಎಂ. ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ, ಪಿ.ಇ.ಎಸ್.ಸಿ.ಇ ಮಂಡ್ಯದಲ್ಲಿ ನಡೆದ – ಬೆಂಗಳೂರು ವಲಯದಲ್ಲಿ ಪ್ರಥಮ ಸ್ಥಾನವನ್ನು ಮತ್ತು ಬಿ.ಎಲ್.ಡಿ.ಇ ವಿಜಯಪುರದಲ್ಲಿ ನಡೆದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಜಿ ಎಂ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ರಕ್ಷಿತಾ.ಎಚ್ ಬಿ, ಲಕ್ಷ್ಮಿ, ಚಂದನ, ಸ್ವಾತಿ, ಬಯೋಟೆಕ್ ವಿಭಾಗದ ಜನನಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗದ ನಮಿತಾ, ಚಂದನ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದ ಚೈತ್ರ, ದಿವ್ಯ, ಸ್ನೇಹಾ, ಇಶ್ರತ್, ರೋಬೋಟಿಕ್ಸ್ ವಿಭಾಗದ ರಂಜಿತಾ, ಸಿವಿಲ್ ವಿಭಾಗದ ಚಂದನ, ಮೆಕ್ಯಾನಿಕಲ್ ವಿಭಾಗದ ಪ್ರೀತಿ ಇವರಿಗೆ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ಪಾಂಡೆ ಎಂ.ಬಿ, ಕಾಲೇಜಿನ ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ಕ್ರೀಡಾ ಸಂಯೋಜಕ ಡಾ. ಕಿರಣ್‍ಕುಮಾರ್ ಎಚ್.ಎಸ್., ಮೇಘನಾ ಜಿ.ಎಚ್., ಸಹಪ್ರಾಧ್ಯಾಪಕರು (ಕಂಪ್ಯೂಟರ್ ಸೈನ್ಸ್ ವಿಭಾಗ), ಮಂಜುಳ ಬಿ.ಕೆ., ಸಹಪ್ರಾಧ್ಯಾಪಕರು (ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಶನ್ ವಿಭಾಗ), ದೈಹಿಕ ಶಿಕ್ಷಕರಾದ ಅಜ್ಜಯ್ಯ ಜಿ ಬಿ ಹಾಗೂ ಹನುಮಂತಪ್ಪ ವೈ. ಇವರುಗಳು ಅಭಿನಂದನೆ ಸಲ್ಲಿಸಿದರು.