ಕುಂಬಳೂರು : ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ರಾಮಪ್ಪ ಚಾಲನೆ

ಕುಂಬಳೂರು : ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕ ರಾಮಪ್ಪ ಚಾಲನೆ

ಮಲೇಬೆನ್ನೂರು, ಜ. 25- ಕುಂಬಳೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಆವರಣದಲ್ಲಿ 16 ಲಕ್ಷ ರೂ. ವೆಚ್ಚದ ನೂತನ ಕೊಠಡಿ ನಿರ್ಮಾಣಕ್ಕೆ ಶಾಸಕ ಎಸ್. ರಾಮಪ್ಪ ಬುಧವಾರ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಲೀಲಾ ಶಿವಕುಮಾರ್, ಉಪಾಧ್ಯಕ್ಷ ಎ.ಕೆ. ಹನುಮಂತಪ್ಪ, ಸದಸ್ಯರಾದ ನಾಗೋಳ್ ಕಲ್ಲೇಶ್, ಕಣ್ಣಾಳ್ ನಾಗೇಂದ್ರಪ್ಪ, ಶ್ರೀಮತಿ ಉಮಾ ಶಿವರಾಮಚಂದ್ರಪ್ಪ, ಶ್ರೀಮತಿ ಮಧು ತಿಮ್ಮಣ್ಣ, ಶ್ರೀಮತಿ ದುರುಗಮ್ಮ ಎ.ಕೆ. ಮಹೇಶಪ್ಪ, ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಅಧ್ಯಕ್ಷ ಎಂ.ಹೆಚ್. ಪರಮೇಶ್ವರಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೈ. ಶ್ರೀನಿವಾಸ್, ಗ್ರಾಮದ ಮುಖಂಡರಾದ ಹುಲ್ಮನಿ ನಿಂಗಪ್ಪ, ಕರಡೇರ ರಾಜಪ್ಪ, ಎ.ಕೆ. ಕುಬೇರಪ್ಪ, ಎ.ಕೆ. ಮಹೇಶಪ್ಪ, ಕೆ. ಸುಭಾಶ್ಚಂದ್ರ, ಕೆ.ಅಶೋಕ, ಹೂಗಾರ್ ಹನುಮಂತಪ್ಪ, ಬಿರಗನಹಳ್ಳಿ ಶಂಭಣ್ಣ, ಬೆನ್ನೂರು ಕರಿಬಸಪ್ಪ, ಎಂ. ವಾಸುದೇವಮೂರ್ತಿ, ಹೆಚ್.ಎಂ. ಸದಾಶಿವ, ಕಾಲೇಜಿನ ಪ್ರಾಚಾರ್ಯ ರಂಗನಾಥ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಗೋವಿಂದಪ್ಪ ಅಗಸಿಬಾಗಿಲು, ಪಿಡಿಓ ಮೂರ್ತಿ, ಜಿ.ಪಂ. ಎಇಇ ಗಿರೀಶ್, ಜೆಇ ಹನುಮಂತಪ್ಪ ಮತ್ತು ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರದ ವೀರಭದ್ರಪ್ಪ, ಮಲೇಬೆನ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಭೋವಿ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

error: Content is protected !!