ಮಾಸ್ಕ್ ಧರಿಸದ ಸವಾರರಿಗೆ ದಂಡ

ಹರಪನಹಳ್ಳಿ, ಸೆ.28 – ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ಪಟ್ಟಣದ ಪುರಸಭೆ ವತಿಯಿಂದ ಪ್ರಮುಖ ರಸ್ತೆ, ಬೀದಿ, ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್‌ ಧರಿಸದೆ ಸಂಚರಿಸುತ್ತಿದ್ದ ವಾಹನ ಸವಾ ರರನ್ನು ಗುರುತಿಸಿ 100 ರೂ. ದಂಡ ವಿಧಿಸಲಾಯಿತು.

ಈ ವೇಳೆ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪಿ.ಮಂಜುನಾಥ್ ಮಾತನಾಡಿ, ಬೇರೆ ರಾಜ್ಯ ಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಕೊರೊನಾಗೆ ಬಲಿಯಾಗುತ್ತಿರುವವರ ಮತ್ತು ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಮ್ಮ ಪುರಸಭೆ ವತಿಯಿಂದ ಈ ದಂಡ ವಸೂಲಿ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದರು.

ನಿಯಂತ್ರಣಕ್ಕೆ ಬಾರದ ಕೊರೊನಾ ಅಟ್ಟಹಾಸ ಮಟ್ಟ ಹಾಕಲು ಫೇಸ್ ಮಾಸ್ಕ್‌ ಧರಿಸುವುದೇ ಪರಿಹಾರ ವಾಗಿದ್ದು, ಈ ಬಗ್ಗೆ ಸಾರ್ವಜನಿಕರಿಗೆ ಎಷ್ಟು ಬಾರಿ ಮನವರಿಕೆ ಮಾಡಿದರೂ ಸಹ ಪ್ರಯೋಜನವಾಗದಿರುವ ಹಿನ್ನೆಲೆಯಲ್ಲಿ ಇಂದಿನಿಂದ ಈ ದಂಡ ವಸೂಲಿ ಪ್ರಕ್ರಿಯೆ ಶುರುವಾಗಿದೆ ಎಂದು ತಿಳಿಸಿದರು.

ಈ ವೇಳೆ ಎಎಸ್‍ಐ ಜಾತಪ್ಪ, ಪೇದೆ ಎಂ.ಅಜ್ಯಯ್ಯ, ಪುರಸಭೆ ಸಿಬ್ಬಂದಿ ಶ್ಯಾಮರಾಜ ಮತ್ತಿತರರು ದಂಡ ವಸೂಲಿ ಕಾರ್ಯದಲ್ಲಿ ತೊಡಗಿದ್ದರು.

error: Content is protected !!