ರೈತ-ಕಾರ್ಮಿಕ ಕಾಯ್ದೆಗಳ ತಿದ್ದುಪಡಿಗೆ ಖಂಡನೆ

ದಾವಣಗೆರೆ, ಸೆ.26- ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಹಾಗೂ ಕಾರ್ಮಿಕ ಕಾಯ್ದೆಯ ತಿದ್ದುಪಡಿ ವಿರೋಧಿಸಿ ಜಿಲ್ಲಾ ಯುವ ಕಾಂಗ್ರೆಸ್‌ ವತಿಯಿಂದ ನಗರದಲ್ಲಿ ನಿನ್ನೆ ಸಂಜೆ ಪಂಜಿನ ಮೆರವಣಿಗೆ ಮುಖೇನ ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಪಂಜು ಹಿಡಿದು ವೃತ್ತದ ಸುತ್ತ ಮೆರವಣಿಗೆ ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ರೈತ ವಿರೋಧಿ ನರೇಂದ್ರ ಮೋದಿ ಎಂದು ಧಿಕ್ಕಾರ ಕೂಗಿದರು.   

ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ, ಭೂ ಒಡೆತನದ ಮಿತಿಯನ್ನು ದ್ವಿಗುಣಗೊಳಿಸಿ ಕಾರ್ಪೊರೇಟ್ ಗುಲಾಮಗಿರಿ ನಿಲ್ಲಿಸಲು ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು. ಕೃಷಿ ವಿರೋಧಿ ನೀತಿಗೆ ಕೈಗನ್ನಡಿಯಾಗಿರುವ ಈ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಲು ಆಗ್ರಹಿಸಿದರು.

ಪಂಜಿನ ಪ್ರತಿಭಟನೆಯಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಹೆಚ್.ಜೆ. ಮೈನುದ್ದೀನ್, ನಿಖಿಲ್ ಕೊಂಡಜ್ಜಿ , ಪ್ರವೀಣ್ ಹುಲ್ಲುಮನೆ , ಕಾಂಗ್ರೆಸ್ ಮುಖಂಡರಾದ ಹೆಚ್. ಸುಭಾನ್‌ಸಾಬ್, ಎಲ್.ಹೆಚ್. ಸಾಗರ್, ಸೈಯದ್ ಕಬೀರ್, ಸಂದೀಪ್‌ಕುಮಾರ್, ಖಾಲಿದ್ ಪೈಲ್ವಾನ್, ಜಮೀರಾ ನವೀದ್, ರೋಷನ್ ಜಮೀರ್, ಎನ್ ಎಸ್ ಯುಐನ ಮುಜಾಹಿದ್, ಸಾಧಿಕ್ ಸದ್ದಾಂ, ಚಂದ್ರು, ಆಜಾಮುಲ್ಲಾ, ಲಿಯಾಖತ್ ಅಲಿ, ಸೈಯದ್ ಮುಸ್ತಫಾ, ಫಹೀಂ, ಸಾಧಿಕ್‌ಖಾನ್, ಸಂತೋಷ್‌ ಕುಮಾರ್, ಬಾಷಾ, ಮುಸ್ತಾಕ್ ಅಹಮ್ಮದ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!