ರಾಣೇಬೆನ್ನೂರು, ಸೆ.23- ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ಆಯಾ ರಾಜ್ಯಗಳಿಗೆ ನೀಡಿರುವ ಸರ್ವೋಚ್ಛ ನ್ಯಾಯಾಲಯದ ತೀರ್ಪು ಸ್ವಾಗತಾರ್ಹವಾಗಿದ್ದು, ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿಯನ್ನು ಪ್ರಸಕ್ತ ಅಧಿವೇಶನದಲ್ಲಿಯೇ ಮಂಡಿಸಿ ಕಾಯ್ದೆ ಜಾರಿಗೊಳಿಸುವಂತೆ ಆದಿಜಾಂಬವ ಸಂಘ ಒತ್ತಾಯಿಸಿದೆ.
ಸರ್ವೋಚ್ಛ ನ್ಯಾಯಾಲಯದ ಐದು ಜನ ನ್ಯಾಯಮೂರ್ತಿಗಳು ನೀಡಿರುವ ತೀರ್ಪು ಕಾಯ್ದೆ ರೂಪಿಸಲು ರಾಜ್ಯ ಸರ್ಕಾರಗಳಿಗೆ ಮುಕ್ತ ಅವಕಾಶ ನೀಡಿದ್ದು, ಈ ಕುರಿತು ಮುಖ್ಯಮಂತ್ರಿಗಳು ಕ್ರಮ ಜರುಗಿಸುವಂತೆ ಸಂಘವು ತಹಶೀಲ್ದಾರರ ಮೂಲಕ ಇಂದು ಮನವಿ ಸಲ್ಲಿಸಿದೆ.
ಸಂಘದ ಪದಾಧಿಕಾರಿಗಳಾದ ಪ್ರಕಾಶ ಪೂಜಾರ, ಮೈಲಪ್ಪ ಗೋಣಿಬಸಮ್ಮನವರ, ಮೈಲಪ್ಪ ದಾಸಪ್ಪನವರ, ಶ್ರೀಕಾಂತ ಸಣ್ಮನಿ, ಬಿ.ಎಚ್. ಮಂಜಪ್ಪ, ವಿ.ಎಂ. ಮಾಳಿಗೇರ, ಬಸವಂತಪ್ಪ ಮಾದರ, ನಾಗರಾಜ ಸಿದ್ದಪ್ಪನವರ, ಎಚ್.ಡಿ. ಹೊನ್ನಕ್ಕಳವರ ಇನ್ನಿತರರಿದ್ದರು.