ಹಂದಿಗಳನ್ನು ಸ್ಥಳಾಂತರಿಸಲು ಒತ್ತಾಯಿಸಿ ಪ್ರತಿಭಟನೆ

ಹರಪನಹಳ್ಳಿ, ಸೆ.10- ಪಟ್ಟಣದಲ್ಲಿನ ಹಂದಿಗೂಡುಗಳನ್ನು ಪಟ್ಟಣದ ಹೊರ ವಲ ಯಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ಸಂಡೂರುಗೇರಿ, ಸುಣಗಾರಗೇರಿ, ಕುರುಬ ಗೇರಿ, ಪಠಾಣಗೇರಿಯ ನಿವಾಸಿಗಳು ಪುರ ಸಭೆಯ ಆವರಣದಲ್ಲಿ ಹಂದಿಗಳ ದಾಳಿಯಿಂದ ಸಾವ ನ್ನಪ್ಪಿದ ಕುರಿಯನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿ, ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ವೇಳೆ ಆರ್.ಟಿ.ಐ ಕಾರ್ಯಕರ್ತ ಜೆ. ಕೆಂಚಪ್ಪ ಮಾತನಾಡಿ, ಪಟ್ಟಣದ ಸಂಡೂರುಗೇರಿ, ಸುಣಗಾರಗೇರಿ, ಕುರುಬಗೇರಿ, ಪಠಾಣಗೇರಿ ಗಳಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದ್ದು, ಮನೆಯ ಮುಂದೆ ಕಟ್ಟಿದ ಕುರಿಗಳ ಮೇಲೆ, ಆಕಳು-ಎಮ್ಮೆಗಳು, ಎಮ್ಮೆ-ಕರುಗಳ ಮೇಲೆ ದಾಳಿ ಮಾಡಿ ತಿಂದು ಹಾಕುತ್ತಿವೆ. ಹಾಗೆಯೇ ಊರ ಪಕ್ಕದಲ್ಲಿ ಬೆಳೆದು ನಿಂತ ಬೆಳೆಗಳನ್ನು ಗುಂಪು ಗುಂಪಾಗಿ ಬಂದು ನಾಶ ಮಾಡುತ್ತಿವೆ. ಇದರಿಂದ ರೈತರು ತುಂಬಾ ತೊಂದರೆಗೆ ಒಳಗಾಗುತ್ತಿದ್ದಾರೆ.  ಈ ಹಿಂದೆ ಪಟ್ಟಣದಲ್ಲಿ ಹಂದಿಗಳು ಮಕ್ಕಳು ಮತ್ತು ಜನ – ಜಾನುವಾರುಗಳ ಮೇಲೆ ದಾಳಿ ಮಾಡಿರುವುದನ್ನು ಖಂಡಿಸಿ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು.

ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಮನವಿ ಸ್ವೀಕರಿಸಿ ಮಾತನಾಡಿ, ಹಂದಿಗಳ ಮಾಲೀಕರನ್ನು ಕರೆಸಿ 15 ದಿನಗಳ ಒಳಗಾಗಿ ಹಂದಿಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಈ ಪ್ರತಿಭಟನೆಯಲ್ಲಿ ಶಿಕಾರಿ ಬಾಲಪ್ಪ, ಇದ್ಲಿ ರಾಮಪ್ಪ, ಎಸ್.ರವಿ, ಸಿ.ನಾಗರಾಜ್, ಹೆಚ್.ಪರಸಪ್ಪ, ಅಬ್ದುಲ್‌ ಅಜೀಜ್, ಇ.ತಿಮ್ಮಪ್ಪ, ಜಿ.ಗೋಣೆಪ್ಪ ಸೇರಿದಂತೆ ಇತರರಿದ್ದರು. 

error: Content is protected !!