ಹರಿಹರ ನಗರ ಅಭಿವೃದ್ಧಿಗೆ ಆಗ್ರಹ

ಜಯಕರ್ನಾಟಕ ಸಂಘಟನೆ ಧರಣಿ

ಹರಿಹರ, ಸೆ.10- ನಗರ ವ್ಯಾಪ್ತಿಗೆ ಬರುವ ಪ್ರಮುಖ ಮುಖ್ಯ ರಸ್ತೆಗಳು, ವಿದ್ಯುತ್ ದೀಪ ಅಭಿವೃದ್ಧಿ/ದುರಸ್ತಿ ಕೆಲಸಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಕಾಲದವರೆಗೆ ಧರಣಿ ಮೂಲಕ ಪ್ರತಿಭಟನೆಯನ್ನು ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿತ್ತು.

ಹರಿಹರ ನಗರ ವ್ಯಾಪ್ತಿಗೆ ಬರುವ ಮುಖ್ಯ ರಸ್ತೆಯಾದ ಕೆಇಬಿ ಯಿಂದ ಹೊಸ ತುಂಗಭದ್ರಾ ಸೇತುವೆಯವರೆಗೆ ಸುಗಮವಾಗಿ ವಾಹನಗಳು ಸಂಚಾರ ಮಾಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆ ಕಾಮಗಾರಿ ಹಲವಾರು ವರ್ಷಗಳಿಂದ ಅಭಿವೃದ್ಧಿ ಪಡಿಸದೆ ಹಾಗೆ ಬಾಕಿ ಉಳಿದುಕೊಂಡಿದೆ. ತುಂಗಭದ್ರಾ ಸೇತುವೆ ಮುಂಭಾಗದಲ್ಲಿ ರಸ್ತೆ ಮತ್ತು ವಿದ್ಯುತ್ ದೀಪ ಸರಿಪಡಿಸಿ ಕೊಡುವವರೆಗೂ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. 

ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದ್, ಉಪಾಧ್ಯಕ್ಷ ಶೇಖರಪ್ಪ, ಪ್ರಧಾನ ಕಾರ್ಯದರ್ಶಿ ಸುನೀಲ್, ಸಂಘಟನಾ ಕಾರ್ಯದರ್ಶಿ ಭರತ್, ಗ್ರಾಮ ಘಟಕದ ಅಧ್ಯಕ್ಷ, ಮಣಿಕುಮಾರ್, ಉಪಾಧ್ಯಕ್ಷರಾದ ಸಂಜೀವ್, ಸಾಗರ್, ಕುಣೆಬೆಳಕೆರೆ ಅಧ್ಯಕ್ಷ ಚಂದ್ರಪ್ಪ, ಗುತ್ತೂರು ಕಾಲೋನಿ ಅಧ್ಯಕ್ಷ ಇರ್ಫಾನ್ ಬೇಗ್ ಹಾಗೂ ಶಂಕ್ರಪ್ಪ, ವಾಗೀಶ್, ಶಬರೀಶ್ ಇನ್ನಿತರರು ಹಾಜರಿದ್ದರು.

error: Content is protected !!