ಸಾರ್ವಜನಿಕರ ದೂರು ಸ್ವೀಕರಿಸದೇ ತೆರಳಿದ ಸಚಿವ ಭೈರತಿ

ಎಡಪಕ್ಷ ಸಂಘಟನೆಗಳ ಆಕ್ರೋಶ

ದಾವಣಗೆರೆ, ಸೆ. 5 – ಶನಿವಾರ ಮಧ್ಯಾಹ್ನ ಸಾರ್ವಜನಿಕರನ್ನು ಭೇಟಿ ಮಾಡು ವುದಾಗಿ ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು ಅವರು ಭೇಟಿಯಾಗದೇ ನಗರದಿಂದ ನಿರ್ಗಮಿಸಿರುವುದಕ್ಕೆ ಸಿಪಿಐ ಹಾಗೂ ಎಡಪಕ್ಷಗಳ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ರಸ್ತೆ ತಡೆಗೂ ಮುಂದಾದ ಘಟನೆ ನಡೆದಿದೆ.

ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಯಲ್ಲಿ ಸಾರ್ವಜನಿಕರನ್ನು ಭೇಟಿ ಮಾಡುವು ದಾಗಿ ಸಚಿವರ ಪ್ರವಾಸದ ವಿವರಗಳಲ್ಲಿ ಪ್ರಕಟಿಸಲಾಗಿತ್ತು. ಅದರಂತೆ ಎಡಪಕ್ಷಗಳ ಸಂಘಟನೆಗಳ ಮುಖಂಡರು ಸಾರ್ವಜನಿಕರ ಸಮಸ್ಯೆಗಳ ಕುರಿತು ಸಚಿವರಿಗೆ ಮನವಿ ಸಲ್ಲಿಸಲು ಕಾದು ನಿಂತಿದ್ದರು. ಆದರೆ, ಸಚಿ ವರು ನಿಗದಿಯಂತೆ ಜಿಲ್ಲಾಡಳಿತ ಭವನಕ್ಕೆ ಬರದೇ ನಗರದಿಂದ ನಿರ್ಗಮಿಸಿದರು. ಇದ ರಿಂದ ಅಸಮಾ ಧಾನಗೊಂಡ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು, ಜಿಲ್ಲಾಡಳಿತ ಭವನದ ಪಿ.ಬಿ. ರಸ್ತೆ ಬಳಿ ತೆರಳಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕಾರ್ಮಿಕ ನಾಯಕ ಹೆಚ್.ಕೆ. ರಾಮಚಂದ್ರಪ್ಪ, ಎರಡು ದಿನಗಳಿಂದ ಮನವಿ ಸಲ್ಲಿಸಲು ನಾವು ಕಾಯುತ್ತಿದ್ದೆವು. ಅಂಗನವಾಡಿ ಕಾರ್ಯಕರ್ತೆಯರು, ಟೈಲರಿಂಗ್ ವೃತ್ತಿಯಲ್ಲಿರುವವರು ಹಾಗೂ ನಾಗರಿಕರ ಹಲವಾರು ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತರಬೇಕಿತ್ತು ಎಂದರು.

ನಗರದಲ್ಲಿ ಶವಗಳನ್ನು ಗೌರವಯುತ ವಾಗಿ ಅಂತ್ಯಕ್ರಿಯೆ ಮಾಡಲು ವಿದ್ಯುತ್ ಚಿತಾಗಾರಗಳೇ ಇಲ್ಲ. ಈ ಬಗ್ಗೆ ಸಚಿವರಿಗೆ ಮನವಿ ಸಲ್ಲಿಸಲು ಬಂದಿರುವುದಾಗಿ ಅವರು ತಿಳಿಸಿದರು.

ರಾಜ್ಯ ಕಟ್ಟಡ ನಿರ್ಮಾಣ ಹಾಗೂ ಕ್ವಾರಿ ಕಾರ್ಮಿಕರ ಸಂಘದ ಮುಖಂಡರಾದ ಹೆಚ್.ಜಿ. ಉಮೇಶ್ ಮಾತನಾಡಿ, ಸರ್ಕಾರಕ್ಕೆ ಜನರ ಕಾಳಜಿ ಹಾಗೂ ಜವಾಬ್ದಾರಿ ಇಲ್ಲ. ಜನರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ದುಡಿಯುವ ವರ್ಗದವರ ಅಹವಾಲು ಹಾಗೂ ಸಮಸ್ಯೆ ಹೇಳಲು ಬಂದರೆ ಸಚಿವರೇ ಬಂದಿಲ್ಲ ಎಂದು ಆಕ್ಷೇಪಿಸಿದರು. ಲಕ್ಷಾಂತರ ಕಟ್ಟಡ ಕಾರ್ಮಿಕರಿಗೆ ಸರ್ಕಾರ ಘೋಷಿಸಿ ರುವ ನೆರವು ತಲುಪಿಲ್ಲ. ಬಿಸಿಯೂಟದ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯ ಕರ್ತೆಯರು, ಟೈಲರಿಂಗ್ ಕಾರ್ಮಿಕರು ಸಚಿವರಿಗೆ ದೂರು ನೀಡಲು ಬಂದಿದ್ದಾರೆ. ಆದರೆ, ಸಚಿವರು ಜನರ ಸಮಸ್ಯೆಗಳನ್ನು ಕೇಳದೇ ಹೋಗಿದ್ದಾರೆ ಎಂದರು.

ನಂತರ ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಸಭೆಯೊಂದನ್ನು ನಿಗದಿಗೊ ಳಿಸಿ ಎಲ್ಲಾ ಮುಖಂಡರನ್ನು ಕರೆಯಿಸಿ ಮಾತನಾಡುವ ವ್ಯವಸ್ಥೆ ಮಾಡುವುದಾಗಿ ಪ್ರತಿಭಟನಾಕಾರರ ಮನವೊಲಿಸಿದರು. ನಂತರ ಸಂಘಟನೆಗಳ ಮುಖಂಡರಿಂದ ಮನವಿ ಪತ್ರಗಳನ್ನು ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು. ಈ ಸಂದರ್ಭದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಸಹ ಕಾರ್ಯದರ್ಶಿ ಆವರಗೆರೆ ಚಂದ್ರು, ಪಿ.ಕೆ. ಲಿಂಗರಾಜು, ಮುಖಂಡರುಗಳಾದ ಆನಂದ ರಾಜ್, ಟಿ.ಎಸ್. ನಾಗರಾಜ್, ಆವರಗೆರೆ ವಾಸು, ರಮೇಶ್, ಐರಣಿ ಚಂದ್ರು, ನರೇಗಾ ರಂಗನಾಥ್, ಸರೋಜಾ, ಗದಿಗೇಶ ಪಾಳೇದ ,ಎಂ.ಬಿ. ಶಾರದಮ್ಮ,ಎಸ್.ಎಸ್. ಮಲ್ಲಮ್ಮ, ಐರಣಿ ಚಂದ್ರು ಮತ್ತಿತರರು ಉಪಸ್ಥಿತರಿದ್ದರು.

error: Content is protected !!