ವಿಂಗ್‌ ಬಲಪಡಿಸಿದಾಗ‌ ಪಕ್ಷ ಬೆಳೆಯಲು ಸಾಧ್ಯ

ಕಾಂಗ್ರೆಸ್ ಸೇವಾದಳ ಸದಸ್ಯತ್ವ ಅಭಿಯಾನದಲ್ಲಿ ಪ್ಯಾರಿಜಾನ್ ಅಭಿಮತ

ದಾವಣಗೆರೆ,‌ ಸೆ.2- ಬ್ರಿಟಿಷರನ್ನು ಹೊಡೆದು ಓಡಿಸುವಲ್ಲಿ ಕಾಂಗ್ರೆಸ್ ಮುಖ್ಯಪಾತ್ರ ವಹಿಸಿದೆ.  ಬಿಜೆಪಿ ಬ್ರಿಟಿಷರಿಗಿಂತ ಅಪಾಯಕಾರಿ ಪಕ್ಷವಾಗಿದ್ದು, ಬ್ರಿಟಿಷರಂತೆ ಒಡೆದು ಆಳುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಜನರಿಗೆ ತಿಳಿಸುವ ಕೆಲಸವನ್ನು ನಮ್ಮ ಕಾಂಗ್ರೆಸ್ ಪಕ್ಷ ಮಾಡಬೇಕಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ರಾಜ್ಯಾಧ್ಯಕ್ಷರೂ, ಎಐಸಿಸಿ ಸದಸ್ಯರೂ ಆಗಿರುವ ಕುಮಾರಿ ಎಸ್.ಪ್ಯಾರಿಜಾನ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಿನ್ನೆ ಏರ್ಪಾಡಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಮತ್ತು ರಾಜ್ಯಕ್ಕೆ ಕಾಂಗ್ರೆಸ್ ಅನಿವಾರ್ಯವಾಗಿದೆ. ಬ್ರಿಟಿಷರನ್ನು ಓಡಿಸಲು ಹಿಂದೂ-ಮುಸ್ಲಿಂ-ಕ್ರೈಸ್ತ ಎಲ್ಲಾ ಜಾತಿ, ಧರ್ಮಗಳು ರಕ್ತ ಸುರಿಸಿವೆ. ಯಾವುದೇ ಜಾತಿ, ಧರ್ಮ ಕೇಳದೇ ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಪಕ್ಷವೇ ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಹರಿಹರದ ಶಾಸಕ ಎಸ್.ರಾಮಪ್ಪ ಮಾತ ನಾಡಿ, ಕಾಂಗ್ರೆಸ್ ಪಕ್ಷಕ್ಕೆ ಸೇವಾದಳ ಬುನಾದಿ ಯಾಗಿದೆ. ಪ್ರಧಾನಿ ನರೇಂದ್ರ ಮೋದಿ 2 ಕೋಟಿ ರೂ. ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಕೋಟ್ಯಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಮೋದಿ ಸುಳ್ಳು ಹೇಳುತ್ತಾ ದೇಶವನ್ನು ಅವನತಿಯ ಕಡೆಗೆ ತಳ್ಳಿದ್ದಾರೆ. ಈಗ ಬಿಜೆಪಿ ವರ್ಚಸ್ ಕಳೆದಿಕೊಂಡಿದೆ. ಈ ನಿಟ್ಟಿನಲ್ಲಿ ಯುವಕರನ್ನು ಪಕ್ಷಕ್ಕೆ ಸೆಳೆಯುವ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ.ಬಸವರಾಜ್ ಮಾತನಾಡಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಮಾಲತೇಶರಾವ್ ಜಾಧವ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸೇವಾ ದಳದ ಜಿಲ್ಲಾಧ್ಯಕ್ಷ ಡೋಲಿ ಚಂದ್ರು, ಉಮಾದೇವಿ, ರಮೇಶ್, ಅಬ್ದುಲ್ ಜಬ್ಬಾರ್, ಕಲ್ಪನಾ ರಾಜು, ಮಂಜುನಾಥ್, ಎಸ್.ಟಿ. ಘಟಕದ ಜಿಲ್ಲಾಧ್ಯಕ್ಷ ಓಬಳೇಶಪ್ಪ, ಸಂಘಟಿತ ಕಾರ್ಮಿಕ ಜಿಲ್ಲಾಧ್ಯಕ್ಷ ನಂಜಾನಾಯ್ಕ, ಸಾಮಾಜಿಕ ಜಾಲತಾಣದ  ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ, ಮಹಿಳಾ ಕಾಂಗ್ರೆಸ್‌ನ ಸುಷ್ಮಾ ಪಾಟೀಲ್, ಆಶಾ ಮುರಳಿ, ಶುಭಮಂಗಳ, ದ್ರಾಕ್ಷಾಯಣಮ್ಮ, ರಾಜೇಶ್ವರಿ ಉಮೇಶ್, ಕವಿತಾ ಚಂದ್ರಶೇಖರ್, ಸುನಿತಾ ಭೀಮಣ್ಣ, ಉಮಾ ಕುಮಾರ, ಗೀತಾ ಚಂದ್ರಶೇಖರ್, ಕಾವೇರಿ, ದಿಲ್ ಶಾ, ರೆಹಜಾನ್, ಲಿಯಕತ್ ಅಲಿ, ಇಬ್ರಾಹಿಂ ಖಲೀಲ್, ದಾದಾಪೀರ್, ಪ್ರವೀಣ್ ಕುಮಾರ್, ಹರೀಶ ಎಚ್, ರಂಗನಾಥ ಸ್ವಾಮಿ, ಖಾಲಿದ್ ಪೈಲ್ವಾನ್, ಯುವರಾಜ್, ಕೆ.ಎಂ. ಮಂಜುನಾಥ್ ಸೇರಿದಂತೆ‌‌ ಇತರರು ಇದ್ದರು.

error: Content is protected !!