ಆಲಸ್ಯ – ನೋವು ಮರೆಯಲು ಕ್ರೀಡೆ ಸಹಕಾರಿ

ವಾರ್ತಾ ಇಲಾಖೆಯ ಬಿ.ಎಸ್ ಬಸವರಾಜ್

ದಾವಣಗೆರೆ,ಆ.30- ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಅದರ ಸಂಭ್ರಮಾಚರಣೆಯ ಪ್ರಯುಕ್ತ ಸಂಡೆ ಕ್ರಿಕೆಟರ್ ಫ್ರೆಂಡ್ಸ್ ಗ್ರೂಪ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು.

ನಗರದ ಐ.ಟಿ.ಐ ಕಾಲೇಜು ಚೌಡೇಶ್ವರಿ ದೇವಾಲಯದ ಆವರಣದಲ್ಲಿ  ಏರ್ಪಡಿಸಲಾಗಿದ್ದ ಈ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ವಾರ್ತಾ ಇಲಾಖೆಯ ಬಿ.ಎಸ್ ಬಸವರಾಜ್ ಅವರು, ಕ್ರೀಡೆಯಿಂದ ಮಾನವನಲ್ಲಿ  ಹೊಸ ಚೈತನ್ಯ ಉಂಟಾಗುತ್ತದೆ. ತಮ್ಮ ಎಲ್ಲಾ ಆಲಸ್ಯ ನೋವುಗಳನ್ನು ಮರೆಯಲು ಈ ಆಟಗಳು ಸಹಕಾರಿಯಾಗಿವೆ ಎಂದರು.

ಯುವಕರು ದುಷ್ಚಟಗಳಿಂದ ದೂರವಿರಬೇಕು. ವ್ಯಸನದಿಂದ ದೇಹದ ಬಲ ಕಡಿಮೆಯಾಗುತ್ತದೆ.  ಇದರಿಂದ ಕ್ರೀಡೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ. ನಿರಂತರ ಕ್ರೀಡಾ ಅಭ್ಯಾಸವಿರಲಿ ಎಂದು ಕರೆ ನೀಡಿದರು.

ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದವು. ತದನಂತರ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಭಗತ್‍ಸಿಂಗ್ ನಗರದ ಜಗದೀಶ್ ತಂಡ 10,000 ರೂ. ಆಕರ್ಷಕ ಟ್ರೋಫಿ ಪಡೆದುಕೊಂಡಿತು. ದ್ವಿತೀಯ ಬಹುಮಾನ 5,000 ರೂ. ಪ್ರಸಾದ ತಂಡ ಪಡೆದುಕೊಂಡಿತು. ತೃತೀಯ ಬಹುಮಾನ ಮುರುಗನ್ ತಂಡ ಪಡೆದುಕೊಂಡಿತು. ಉತ್ತಮ ಬ್ಯಾಟ್ಸ್‍ಮನ್ ಆಟೋ ರವಿಕುಮಾರ್,  ಉತ್ತಮ ಬೌಲರ್ ಸಿದ್ದು ಹುಬ್ಳಿ, ಸರಣಿ ಶ್ರೇಷ್ಟ ಮಂಜುನಾಥ್ ಪ್ರಶಸ್ತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಈ ಸಂಘದ ಅಧ್ಯಕ್ಷ ಮುರು ಗನ್, ಕಾರ್ಯದರ್ಶಿ ಪ್ರಸಾದ್, ಸದಸ್ಯರಾದ ಶ್ರೀನಿವಾಸ್‍ ಬೀಡಾ, ಆಟೋ ರವಿಕುಮಾರ್, ಶರತ್‍ಕುಮಾರ್, ಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!