ರಾಣೇಬೆನ್ನೂರು ಅಭಿವೃದ್ಧಿಗೆ ಸಿಎಂರಿಂದ 30 ಕೋಟಿ ರೂ. : ಶಾಸಕ ಅರುಣಕುಮಾರ

ರಾಣೇಬೆನ್ನೂರು, ಆ. 28 – ನಗರದ ಸಮಗ್ರ ಅಭಿವೃದ್ಧಿಗೆ 50 ಕೋಟಿ ವಿಶೇಷ ಅನುದಾನ ನೀಡುವಂತೆ ಮುಖ್ಯಮಂತ್ರಿ ಗಳನ್ನು ಕೇಳಲಾಗಿತ್ತು. ಅವರು ನಿನ್ನೆ  30 ಕೋಟಿ ರೂ. ಮಂಜೂರು ಮಾಡಿದ್ದು, ಅದರಲ್ಲಿ 10 ಕೋಟಿ ಹಣವನ್ನು ನಿನ್ನೆಯೇ ಬಿಡುಗಡೆ ಮಾಡಿದ್ದಾರೆ ಎಂದು ಶಾಸಕ ಅರುಣಕುಮಾರ ಪೂಜಾರ ತಿಳಿಸಿದ್ದಾರೆ.

ಇಂದು ನಗರ ಹಾಗೂ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಅವರು ಮಾತನಾಡಿದರು.

ಕೋವಿಡ್ ನ ವಿಷಮ ಪರಿಸ್ಥಿತಿಯಲ್ಲಿ ಹೆಚ್ಚು ಕರ ಸಂಗ್ರಹಿಸಿದ ರಾಜ್ಯ ನಮ್ಮದಾಗಿ ರುವುದು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಕಾರ್ಯ ವೈಖರಿಗೆ ಹಿಡಿದ ಕನ್ನಡಿ ಎಂದು ಶಾಸಕರು ಹೇಳಿದರು.

ತಾ.ಪಂನಲ್ಲಿ ಅಂಗವಿಕಲರಿಗೆ ಟ್ರೈಸಿಕಲ್  ವಿತರಣೆ ಮಾಡಿದ ನಂತರ ವಿವಿಧ ಗ್ರಾಮಗಳಲ್ಲಿ ಶಾಲಾ ಕೊಠಡಿಗಳ, ನಾಡಕಛೇರಿ ಕಟ್ಟಡ ಕಾಮಗಾರಿಗೆ ಚಾಲನೆ, ಶುದ್ಧ ಕುಡಿಯುವ ನೀರಿನ ವಿತರಣೆ ಮಾಡಿದರು.

 ಜಿಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ, ಸದಸ್ಯೆ ಗದಿಗೆವ್ವ ದೇಸಾಯಿ, ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಗ್ರಾಪಂ ಅಧ್ಯಕ್ಷರು,  ಸದಸ್ಯರು, ಬಿಜೆಪಿ ಮುಖಂಡರಾದ ಮಂಜುನಾಥ ಓಲೇಕಾರ, ಪವನ ಮಲ್ಲಾಡ, ಶಿಕ್ಷಣಾಧಿಕಾರಿ ಶ್ರೀಧರ, ಇಓ ಎಸ್.ಎಂ.ಕಾಂಬಳೆ ಮುಂತಾದವರಿದ್ದರು.

error: Content is protected !!