ದಾವಣಗೆರೆ,ಆ.12- ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳು ಕೊರೊನಾದಿಂದ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ, ಶಾಮನೂರಿನ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀ ಆಂಜನೇಯ ಸ್ವಾಮಿಗೆ 101 ತೆಂಗಿನ ಕಾಯಿಗಳನ್ನು ಒಡೆದು ಎಸ್ಸೆಸ್ – ಎಸ್ಸೆಸ್ಸೆಂ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್, ದೂಡಾ ಮಾಜಿ ಅಧ್ಯಕ್ಷ ಜಿ.ಹೆಚ್. ರಾಮಚಂದ್ರಪ್ಪ, ಕಾಂಗ್ರೆಸ್ ಮುಖಂಡರಾದ ಶಾಮ ನೂರು ಟಿ. ಬಸವರಾಜ್, ಪಾಲಿಕೆ ಮಾಜಿ ಸದಸ್ಯರು ಗಳಾದ ಎನ್. ಸುರೇಶ್, ಎಸ್.ಜಿ.ಹನುಮಂತಪ್ಪ, ಮುಖಂಡರುಗಳಾದ ಕೆ.ಎಂ. ಚಂದ್ರಶೇಖರ್, ಗುಂಟನೂರು ಪ್ರಕಾಶ್, ಜಿ. ಪರಮೇಶ್, ಟಿ.ಎಂ. ಹರೀಶ್, ಜಿ.ಎನ್. ಸೋಮಶೇಖರ್, ಸಣ್ಣಹಾಲಪ್ಳ ಸಿದ್ದೇಶ್, ಬಿಂದಪ್ಳ ಸಿದ್ದೇಶ್, ಬಿ.ರುದ್ರೇಶ್, ಗಿರಳ್ಳೇರ ಶ್ರೀನಿವಾಸ್, ಗಿರಿಯಜ್ಜಿ ಶ್ರೀನಿವಾಸ್, ಕಣ್ಣಾಳ್ ಅಂಜಿನಪ್ಪ, ಓಬಜ್ಜಿ ಬಸವರಾಜಪ್ಪ, ಜಯಪ್ಪ ಬೆಳಕೇರಿ, ಶೇಖರಪ್ಪ ಕುರುಬರ, ಮಾರುತಿ ಮತ್ತಿತರರು ಉಪಸ್ಥಿತರಿದ್ದರು.