ಕೆ.ಎನ್. ಹಳ್ಳಿಯಲ್ಲಿ 7, ವಾಸನ ಮತ್ತು ಉಕ್ಕಡಗಾತ್ರಿಯಲ್ಲಿ ತಲಾ ಮೂವರಿಗೆ ಸೋಂಕು
ಮಲೇಬೆನ್ನೂರು, ಆ. 10- ಪಟ್ಟಣದಲ್ಲಿ ಸೋಮವಾರ ಪುರಸಭೆ ಸದಸ್ಯರೊಬ್ಬರು, ಕಂದಾಯ ನಿರೀಕ್ಷಕ ಸೇರಿದಂತೆ ಒಟ್ಟು 14 ಜನರಿಗೆ ಸೋಂಕು ದೃಢಪಟ್ಟಿದ್ದು, ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 62 ಮತ್ತು ಹೋಬಳಿಯ ಗ್ರಾಮೀಣ ಪ್ರದೇಶದಲ್ಲಿ 42 ಸೇರಿ ಒಟ್ಟು 104 ಆಗಿದೆ.
ಇಲ್ಲಿನ 12ನೇ ವಾರ್ಡ್ ಪುರಸಭೆ ಸದಸ್ಯರಿಗೆ ಮತ್ತು 2ನೇ ವಾರ್ಡ್‌ನಲ್ಲಿ 65 ವರ್ಷದ ವ್ಯಕ್ತಿಗೆ, 6ನೇ ವಾರ್ಡ್‌ನಲ್ಲಿ ಈಗಾಗಲೇ ಸೀಲ್‌ಡೌನ್ ಆಗಿರುವ ಮನೆಯಲ್ಲಿ ಇಬ್ಬರಿಗೆ ಮತ್ತು 8ನೇ ವಾರ್ಡ್ ನ ಎ.ಕೆ. ಕಾಲೋನಿಯಲ್ಲಿ 5 ಜನ ಪ್ರಥಮ ಸಂಪರ್ಕಿತರಿಗೆ, 4 ಜನ ದ್ವಿತೀಯ ಸಂಪರ್ಕಿತರಿಗೆ ಸೋಂಕು ಕಾಣಿಸಿಕೊಂಡಿದೆ.
ಕಂದಾಯ ನಿರೀಕ್ಷಕ ಅವರಿಗೆ ಪಾಸಿಟಿವ್ ಬಂದಿರುವುದರಿಂದ ಅವರ ಕಛೇರಿಯನ್ನು ಸೀಲ್‌ಡೌನ್ ಮಾಡಲಾಯಿತು. ಉಪ ತಹಶೀಲ್ದಾರ್ ಆರ್. ರವಿ, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಪುರಸಭೆ ಸದಸ್ಯ ಎ. ಆರೀಫ್ ಅಲಿ, ಪುರಸಭೆ ಅಧಿಕಾರಿಗಳಾದ ದಿನಕರ್, ಉಮೇಶ್, ಗಣೇಶ್, ಗುರುಪ್ರಸಾದ್, ನವೀನ್ ಮತ್ತಿತರರು ಹಾಜರಿದ್ದು, ಸೋಂಕಿತರ ಏರಿಯಾಗಳನ್ನು ಸೀಲ್‌ಡೌನ್ ಮಾಡಿದರು. ಕೆ.ಎನ್. ಹಳ್ಳಿಯಲ್ಲಿ ಇತ್ತೀ ಚೆಗೆ ಜರುಗಿದ ಮದುವೆಯಲ್ಲಿ ಭಾಗವಹಿಸಿದ್ದರು ಎನ್ನಲಾದ 7 ಜನರಿಗೆ ಮತ್ತು ಉಕ್ಕಡಗಾತ್ರಿಯಲ್ಲಿ ಒಂದೇ ಮನೆಯ ಮೂವರಿಗೆ ಹಾಗೂ ವಾಸನ ಗ್ರಾಮದಲ್ಲಿ ಮೂವರಿಗೆ ಶುಕ್ರವಾರ ಕೊರೊನಾ ಪಾಸಿಟಿವ್ ಬಂದಿದೆ. ಇವರಲ್ಲಿ ಕೆಲವರನ್ನು ದಾವಣಗೆರೆ ಸಿ.ಜಿ. ಆಸ್ಪತ್ರೆಗೆ ಮತ್ತು ಉಳಿದವರನ್ನು ಗುತ್ತೂರಿನ ಕೋವಿಡ್ ಕೇರ್ ಸೆಂಟರ್‌ಗೆ ಶಿಫ್ಟ್ ಮಾಡಲಾಯಿತು.