ರಾಮ ಮಂದಿರಕ್ಕೆ 2,100 ಕೆಜಿ ತೂಕದ ಗಂಟೆ

ಜಲೇಸರ್ (ಉತ್ತರ ಪ್ರದೇಶ), ಆ. 9 – ಉತ್ತರ ಪ್ರದೇಶದ ಜಲೇಸರ್ ನಗರದ ಹಿಂದೂ ಹಾಗೂ ಮುಸ್ಲಿಮ್ ಕಲಾವಿದರು ಸೇರಿಕೊಂಡು ಅಯೋಧ್ಯೆಯ ರಾಮ ದೇವಾಲಯಕ್ಕೆ 2,100 ಕೆಜಿ ತೂಕದ ಗಂಟೆಯನ್ನು ರೂಪಿಸುವು ದರ ಮೂಲಕ ಗಮನ ಸೆಳೆದಿದ್ದಾರೆ.

ಅಷ್ಟಧಾತುವಿನಿಂದ ಮಾಡಲಾದ ಈ ಗಂಟೆ ಭಾರತದಲ್ಲಿ ತಯಾರಿಸಲಾದ ಅತಿ ದೊಡ್ಡ ಗಾತ್ರದ ಗಂಟೆಗಳಲ್ಲಿ ಒಂದಾಗಿದೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಕ್ಷಿದಾರರಾಗಿದ್ದ ನಿರ್ಮೋಹಿ ಅಖಾಡಾದ ಮನವಿಯ ಮೇರೆಗೆ ಈ ಬೃಹತ್ ಗಂಟೆಯನ್ನು ರೂಪಿಸಲಾಗಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ದೇವಾಲಯ ನಿರ್ಮಾಣದ ಪರವಾಗಿ ಆದೇಶ ಹೊರಡಿಸಿತ್ತು. ಆನಂತರದಲ್ಲಿ ಗಂಟೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. ಇದರ ಒಟ್ಟಾರೆ ವೆಚ್ಚ 21 ಲಕ್ಷ ರೂ.ಗಳಾಗಿದೆ.

ಕಳೆದ 30 ವರ್ಷಗಳಿಂದ ಗಂಟೆ ನಿರ್ಮಿಸುವ ಕಾರ್ಯದಲ್ಲಿ ತೊಡಗಿರುವ ದಾವು ದಯಾಳ್ ಅವರು ಬೃಹತ್ ಗಂಟೆಯ ನಿರ್ಮಾಣ ಕಾರ್ಯ ನಿರ್ವಹಿಸಿದ್ದಾರೆ. ಇದರ ವಿನ್ಯಾಸ ರೂಪಿಸಿದ್ದು ಇಕ್ಬಾಲ್ ಮಿಸ್ತ್ರಿ.

ನಮ್ಮ ಮುಸ್ಲಿಮ್ ಸಹೋದರರು ಗಂಟೆಯ ವಿನ್ಯಾಸ ಹಾಗೂ ಅದನ್ನು ಪಾಲಿಶ್ ಮಾಡುವುದರಲ್ಲಿ ಹೆಚ್ಚಿನ ಪರಿಣಿತಿ ಹೊಂದಿದ್ದಾರೆ ಎಂದು ದಯಾಳ್ ಹೇಳಿದ್ದಾರೆ. ಇಷ್ಟು ಭಾರೀ ಗಾತ್ರದ ಗಂಟೆಯನ್ನು ರೂಪಿಸುವಾಗ ಸಮಸ್ಯೆಗಳು ಹಲವು ಪಟ್ಟು ಹೆಚ್ಚಾಗುತ್ತವೆ. ಒಂದೇ ಒಂದು ಸಣ್ಣ ಲೋಪ ತಿಂಗಳುಗಳ ಪರಿಶ್ರಮ ವ್ಯರ್ಥ ಮಾಡುತ್ತವೆ ಎಂದು  ದಯಾಳ್ ಹೇಳಿದ್ದಾರೆ. ಇಡೀ ಗಂಟೆಯನ್ನು ಎರಕ ಹೊಯ್ಯುವಾಗ ಐದು ಸೆಕೆಂಡುಗಳ ವಿಳಂಬವಾದರೂ ಸಹ ಇಡೀ ಪರಿಶ್ರಮ ವ್ಯರ್ಥವಾದಂತೆ ಎಂದು ಮಿಸ್ತ್ರಿ ಹೇಳಿದ್ದಾರೆ.

ಈ ಇಡೀ ಗಂಟೆಯಲ್ಲಿ ಹಲವು ಭಾಗಗಳಿಲ್ಲ. ಇಡೀ ಗಂಟೆ ಒಂದೇ ಭಾಗವಾಗಿದೆ. ಹಲವು ತುಂಡುಗಳನ್ನು ತಂದು ವೆಲ್ಡ್ ಮಾಡಿಲ್ಲ. ಹೀಗಾಗಿ ಪರಿಶ್ರಮ ಮತ್ತಷ್ಟು ಹೆಚ್ಚಾಗಿದೆ ಎಂದು 56 ವರ್ಷದ ಮಿಸ್ತ್ರಿ ಹೇಳಿದ್ದಾರೆ.

ಈ ಇಡೀ ಗಂಟೆಯಲ್ಲಿ ಹಲವು ಭಾಗಗಳಿಲ್ಲ. ಇಡೀ ಗಂಟೆ ಒಂದೇ ಭಾಗವಾಗಿದೆ. ಹಲವು ತುಂಡುಗಳನ್ನು ತಂದು ವೆಲ್ಡ್ ಮಾಡಿಲ್ಲ. ಹೀಗಾಗಿ ಪರಿಶ್ರಮ ಮತ್ತಷ್ಟು ಹೆಚ್ಚಾಗಿದೆ ಎಂದು 56 ವರ್ಷದ ಮಿಸ್ತ್ರಿ ಹೇಳಿದ್ದಾರೆ.

ಭಾರತದಲ್ಲೇ ಅತಿ ದೊಡ್ಡ ಗಂಟೆಗಳಲ್ಲಿ ಒಂದಾ ಗಿರುವ ಇದನ್ನು ರಾಮ ಮಂದಿರಕ್ಕೆ ದಾನ ಮಾಡ ಲಾಗುವುದು ಎಂದು ಜಲೇಸರ್ ನಗರ ಸಭೆಯ ಅಧ್ಯಕ್ಷ ರಾಗಿರುವ ವಿಕಾಸ್ ಮಿತ್ತಲ್ ಹೇಳಿದ್ದಾರೆ. ಅವರ ಮಾಲೀ ಕತ್ವದ ವರ್ಕ್‌ಷಾಪ್‌ನಲ್ಲಿ ಈ ಗಂಟೆಯನ್ನು ನಿರ್ಮಿಸಲಾಗಿದೆ.

ದೈವೀಕ ಕಾರಣಕ್ಕಾಗಿ ಈ ಗಂಟೆಯನ್ನು ನಿರ್ಮಿಸುವ ಅವಕಾಶ ನಮಗೆ ದೊರೆತಿದೆ ಎಂದು ನಾವು ಭಾವಿಸಿದ್ದೇವೆ. ಹೀಗಾಗಿ ಗಂಟೆಯನ್ನು ದೇವಾಲಯಕ್ಕೆ ನಾವೇ ದಾನ ಮಾಡಲು ನಿರ್ಧರಿಸಿದ್ದೇವೆ. ಇದಕ್ಕೆ 21 ಲಕ್ಷ ರೂ. ವೆಚ್ಚವಾಗಿದೆ ಎಂದು ಅಧ್ಯಕ್ಷ ಮಿತ್ತಲ್ ಅವರ ಸಹೋದರ ಆದಿತ್ಯ ಮಿತ್ತಲ್ ತಿಳಿಸಿದ್ದಾರೆ.

ಹಿಂದೂ ಹಾಗೂ ಮುಸ್ಲಿಮರಿಬ್ಬರನ್ನು ಒಲಗೊಂಡ 25 ಸದಸ್ಯರ ತಂಡ ನಾಲ್ಕು ತಿಂಗಳ ಕಾಲ ಪರಿಶ್ರಮಿಸಿ ಈ ಗಂಟೆಯನ್ನು ರೂಪಿಸಿದೆ.  ಇದಕ್ಕೂ ಮುಂಚೆ ದಯಾಳ್ ಅವರು 101 ಕೆಜಿ ತೂಕದ ಗಂಟೆಯನ್ನು ರೂಪಿಸಿದ್ದರು. ಇದನ್ನು ಉತ್ತರಖಾಂಡದ ಕೇದಾರನಾಥ ದೇವಾಲಯದಲ್ಲಿ ಬಳಸಲಾಗುತ್ತಿದೆ.

ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯದಲ್ಲಿ ಸಾವಿರ ಕೆಜಿಯ ಗಂಟೆಯನ್ನು ನಾವೇ ರೂಪಿಸಿದ್ದೆವು ಎಂದೂ ಸಹ ದಯಾಳ್ ಹೇಳಿದ್ದಾರೆ.

ಜಲೇಸರ್‌ನಲ್ಲಿ ಹಿತ್ತಾಳೆಯಿಂದ ರೂಪಿಸುವ ಕರಕುಶಲ ವಸ್ತುಗಳು ಸಾಕಷ್ಟು ಹೆಸರು ಮಾಡಿವೆ. ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರು ‘ಒಂದು ಜಿಲ್ಲೆ – ಒಂದು ಉತ್ಪನ್ನ’ ಯೋಜನೆ ಯಡಿ ಜಲೆಸೇರ್‌ ಉದ್ಯಮಗಳಿಗೆ ನೆರವು ನೀಡುತ್ತಿದ್ದಾರೆ. ಜಲೇಸರ್ ಮಣ್ಣಿನ ವಿಶೇಷತೆಯೂ ಹಿತ್ತಾಳೆಯ ಕರಕುಶಲ ವಸ್ತುಗಳನ್ನು ರೂಪಿಸಲು ನೆರವಾಗುತ್ತಿದೆ. ಇಲ್ಲಿನ ಮಣ್ಣನ್ನು ಹಸಿ ಮಾಡಿ ಸುಲಭವಾಗಿ ಮಾದರಿಗಳನ್ನನ ರೂಪಿಸಬಹುದಾಗಿದೆ. ಇದು ಜಲೇಸರ್‌ನ ನೈಸರ್ಗಿಕ ಸಂಪನ್ಮೂಲ. ಇದಕ್ಕೆ ಭಾರೀ ಬೇಡಿಕೆ ಇದೆ ಎಂದು ಮಿತ್ತಲ್ ತಿಳಿಸಿದ್ದಾರೆ.

ಈ ಮಣ್ಣಿನ ನೆರವಿನಿಂದ ರೂಪಿಸಿದ ಗಂಟೆಗಳಿಂದ ಸದ್ದು ಉತ್ತಮವಾಗಿ ಬರುತ್ತದೆ. ಬಹತ್ ರಾಮ ದೇವಾಲಯದಲ್ಲಿ ಅಳವಡಿಸುವ ಈ ಗಂಟೆಯ ಸದ್ದನ್ನು 15 ಕಿ.ಮೀ. ದೂರದಿಂದಲೂ ಆಲಿಸಬಹುದು ಎಂದವರು ತಿಳಿಸಿದ್ದಾರೆ.

error: Content is protected !!