ಕಾಂಗ್ರೆಸ್ ಪಕ್ಷದ ನಿರ್ಮೂಲನೆ ಸುಲಭದ ಮಾತಲ್ಲ

136ನೇ ಕಾಂಗ್ರೆಸ್ ಸಂಸ್ಥಾಪನಾ ವರ್ಷಾಚರಣೆ ಪ್ರಯುಕ್ತ ಸಮರ್ಪಣಾ ಸಮಾವೇಶದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ

ದಾವಣಗೆರೆ, ಡಿ.28- ಕಾಂಗ್ರೆಸ್ ಪಕ್ಷದ ನಿರ್ಮೂಲನೆ ಅಷ್ಟು ಸುಲಭವಲ್ಲ. ನಿರ್ಮೂ ಲನೆ ಮಾಡಲು ಸಾಧ್ಯವಿಲ್ಲ. ಬರುವ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದೇ ಬರುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಬಿಜೆಪಿ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ.

ಅವರು, ಇಂದು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯ ಎಸ್.ಎಸ್. ಭವನದಲ್ಲಿ 136ನೇ ಕಾಂಗ್ರೆಸ್ ಸಂಸ್ಥಾಪನಾ ವರ್ಷಾಚರಣೆ ಪ್ರಯುಕ್ತ ನಡೆದ ಸಮರ್ಪಣಾ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದರು.

ವಿರೋಧ ಪಕ್ಷವಾದ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದ ಕಾಂಗ್ರೆಸ್ ಸಾಧನೆ ಬಗ್ಗೆ ಪ್ರಶ್ನಿಸುತ್ತಾ ಟೀಕೆ, ಗೂಬೆ ಕೂರಿಸುವ, ಮರೆಮಾಚುವ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡುವುದಾಗಿ ಹೇಳಲಾಗು ತ್ತಿದೆ. ಆದರೆ, ಕಾಂಗ್ರೆಸ್ ಪಕ್ಷವು ಪ್ರಪಂಚದಲ್ಲೇ ಭಾರತವನ್ನು ಇತರೆ ದೇಶಗಳು ತಿರುಗಿ ನೋ ಡುವಂತೆ ಮಾಡಿದ್ದು, ಪಕ್ಷವು ಬೆಳೆದು ಬಂದ ದಾರಿ, ಅಭಿವೃದ್ಧಿ ಸಾಧನೆ, ಜನರಿಗೆ ನೀಡಿದ ಕೊಡುಗೆಗಳೇ ಇದಕ್ಕೆಲ್ಲಾ ತಕ್ಕ ಉತ್ತರವಾಗಿದೆ. ಕಾಂಗ್ರೆಸ್ ಸಾಧನೆ, ಸಿದ್ದಾಂತವನ್ನು ಮೆಚ್ಚಿರುವ ಜನರೇ ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.

ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿ, ಅಂತೆಯೇ ತ್ಯಾಗ-ಬಲಿದಾನಗಳ ಮುಖೇನ ಸ್ವಾತಂತ್ರ್ಯ ತಂದುಕೊಡುವಲ್ಲಿ ಮುಂಚೂಣಿಯ ಲ್ಲಿದ್ದ ಪಕ್ಷವೆಂದರೆ ಕಾಂಗ್ರೆಸ್ ಪಕ್ಷ. ಅಲ್ಲದೆಯೇ ಸ್ಥಾಪನೆಯಾದ 135 ವರ್ಷಗಳ ಕಾಲವೂ ದೇಶದ ಜನರ ಏಳಿಗೆ ಮತ್ತು ಉದ್ಧಾರಕ್ಕಾಗಿ ಕೆಲಸ ಮಾಡಿದೆ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷವೇ ಕಾರಣಕರ್ತವಾಗಿದೆ ಎಂದು ಹೇಳಿದರು.

ದೇಶದ ಅನ್ನದಾತರು ಕಳೆದ 1 ತಿಂಗಳಿನಿಂದ ದೆಹಲಿ ಗಡಿಯಲ್ಲಿ ತಮ್ಮ ಹಕ್ಕೊತ್ತಾಯಗಳಿಗಾಗಿ ಚಳಿಯಲ್ಲೂ ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ಮೋದಿ ಅವರು ರೈತರ ಸಂಕಷ್ಟವನ್ನು ನೇರವಾಗಿ ಭೇಟಿ ಮಾಡಿ ಆಲಿಸುವ ಸೌಜನ್ಯವನ್ನೂ ತೋರದೇ ನಿರ್ಲಕ್ಷ್ಯ ವಹಿಸಿದ್ದು, ಇಂತಹ ಸರ್ಕಾರ ಇದ್ದರೂ ಸತ್ತಂತಾಗಿದೆ. ರೈತರನ್ನು ಬೀದಿಗೆ ತಂದಿರುವುದೇ ಬಿಜೆಪಿ ರೈತರಿಗೆ ನೀಡಿದ ಕೊಡುಗೆ ಎಂದು ಆರೋಪಿಸಿದರು.

ಕೆಪಿಸಿಸಿ ವಕ್ತಾರ ಡಿ. ಬಸವರಾಜ್,  ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ ಮಾತನಾಡಿದರು.  

ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ. ನಿಂಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಜಿಲ್ಲಾ ಕಾರ್ಯದರ್ಶಿ ಎಸ್. ಮಲ್ಲಿಕಾರ್ಜುನ್, ನಗರ ಪಾಲಿಕೆ ಸದಸ್ಯ ಚಮನ್ ಸಾಬ್, ಮಾಜಿ ಸದಸ್ಯ ಕೆ.ಜಿ.ಶಿವಕುಮಾರ್, ಅಲಿ ರಹಮತ್, ಮೈನುದ್ದೀನ್, ಸೇವಾ ದಳದ ಡೋಲಿ ಚಂದ್ರು, ಅಬ್ದುಲ್ ಜಬ್ಬಾರ್, ನಂಜಾನಾಯ್ಕ, ಜಮ್ನಳ್ಳಿ ನಾಗರಾಜ್, ಮಂಜಪ್ಪ, ಲಿಯಾಖತ್ ಅಲಿ, ಬಾಷಾ, ಗೋಪಾಲ್, ಮೊಟ್ಟೆ ದಾದಾಪೀರ್, ಕೆ.ಪಿ.ಮಲ್ಲಿಕಾರ್ಜುನ್, ಸುಷ್ಮಾ ಪಾಟೀಲ್, ಕವಿತಾ ಚಂದ್ರಶೇಖರ್, ದ್ರಾಕ್ಷಾಯಣಮ್ಮ, ಗೀತಾ, ಉಮಾ ಕುಮಾರ್, ಮಂಗಳಮ್ಮ, ರಾಜೇಶ್ವರಿ, ಮಂಜಮ್ಮ ಸೇರಿದಂತೆ ಇತರರಿದ್ದರು. 

ಈ ಕಾರ್ಯಕ್ರಮಕ್ಕೂ ಮುನ್ನ ನಗರ ಪಾಲಿಕೆ ಆವರಣದ ಮಹಾತ್ಮ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನ್ ರಾಮ್ ಅವರ ಪ್ರತಿಮೆ ಮತ್ತು ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಪಾಲಿಕೆ ಆವರಣದಿಂದ ಬೈಕ್ ರಾಲಿ ಮುಖೇನ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾಂಗ್ರೆಸ್ ಕಛೇರಿಗೆ ಆಗಮಿಸಲಾಯಿತು.

ಬಿಜೆಪಿಗೆ ತಿರುಗೇಟು: ಕಾಂಗ್ರೆಸ್ ಪಕ್ಷದ ಮುತ್ಸದ್ಧಿ ನಾಯಕರಾದ ಡಾ. ಶಾಮನೂರು ಶಿವಶಂಕರಪ್ಪ, ಎಸ್.ಎಸ್. ಮಲ್ಲಿಕಾರ್ಜುನ್ ಅವರಾದಿಯಾಗಿ ಜಿಲ್ಲೆಯ ಎಲ್ಲಾ ಶಾಸಕರುಗಳು ಅಭಿವೃದ್ಧಿಗೆ ಶ್ರಮಿಸಿದ್ದರು. ಆದರೆ ಬಿಜೆಪಿಯವರು ಅವರ ಅಭಿವೃದ್ಧಿಯನ್ನು ಸಹಿಸದೇ ಶಾಮನೂರು ಕುಟುಂಬದ ವಿರುದ್ಧ ವೈಯಕ್ತಿಕ ತೇಜೋವಧೆ ಮಾಡುವುದನ್ನು ಜಿಲ್ಲಾ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಹೆಚ್.ಬಿ. ಮಂಜಪ್ಪ ಎಚ್ಚರಿಸಿದರು.

error: Content is protected !!