ಎಲ್ಲಾ ವರ್ಗಗಳ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಕನಕ ಪಟ್ಟಣ ಸಹಕಾರ ಬ್ಯಾಂಕ್

ಎಲ್ಲಾ ವರ್ಗಗಳ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಕನಕ ಪಟ್ಟಣ ಸಹಕಾರ ಬ್ಯಾಂಕ್ - Janathavaniದಾವಣಗೆರೆ,ಡಿ.28- ಎಲ್ಲಾ ವರ್ಗಗಳ ಗ್ರಾಹಕರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಕನಕ ಪಟ್ಟಣ ಸಹಕಾರ ಬ್ಯಾಂಕ್ ತನ್ನದೇ ಆದ ಸೇವೆಯಿಂದಾಗಿ ಸಮಾಜದಲ್ಲಿ ಪ್ರತಿಷ್ಠಿತ ಬ್ಯಾಂಕು ಎಂದು ಗುರುತಿಸಿಕೊಂಡಿದೆ ಎಂದು ಹಿರಿಯ ನ್ಯಾಯವಾದಿಯೂ ಆಗಿರುವ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ ಹರ್ಷಗೊಂಡರು.

ಕೊರೊನಾ ವೈರಸ್ ನಿಂದಾಗಿ ಸರ್ಕಾರ ರೂಪಿಸಿರುವ ವಿಡಿಯೋ ಕಾನ್ಫರೆನ್ಸ್ – ವೆಬ್ ಕಾಸ್ಟ್ ಮೂಲಕ ನಿನ್ನೆ ಏರ್ಪಾಡಾಗಿದ್ದ ಕನಕ ಪಟ್ಟಣ ಸಹಕಾರ ಬ್ಯಾಂಕ್ ನ 23ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕೆಂಬ ಸದುದ್ದೇಶದಿಂದ ಅವರ ಅಗತ್ಯಕ್ಕನುಗುಣವಾಗಿ ನೀಡುತ್ತಿರುವ ಸಾಲ – ಸೌಲಭ್ಯಗಳಿಂದಾಗಿ ಎಲ್ಲಾ ವರ್ಗಗಳ ಗ್ರಾಹಕರ ಮಧ್ಯೆ ಕನಕ ಪಟ್ಟಣ ಸಹಕಾರ ಬ್ಯಾಂಕ್ ಪ್ರತಿಷ್ಠಿತ ಸಹಕಾರ ಬ್ಯಾಂಕುಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ಕಳೆದ 7-8 ತಿಂಗಳಿ ನಿಂದ ಆಕಸ್ಮಿಕವಾಗಿ ಬಂ ದೊದಗಿದ ಕೊರೊನಾ ವೈರಸ್ ನಡುವೆಯೂ ಕಳೆದ ವರ್ಷಕ್ಕಿಂತ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚಿನ ಠೇವಣಿ ಸಂಗ್ರಹಿಸಲಾಗಿದ್ದು, ಇದು ಬ್ಯಾಂಕ್ ಸಲ್ಲಿಸುತ್ತಿರುವ ಅತ್ಯುತ್ತಮ ಸೇವೆ ಮತ್ತು ಸಾರ್ವಜನಿಕರಿಂದ ಪಡೆದ ಮೆಚ್ಚುಗೆಯನ್ನು ಪ್ರತಿಬಿಂಬಿಸುತ್ತದೆ ಎಂದು ಲೋಕಿಕೆರೆ ಸಿದ್ದಪ್ಪ ಅವರು ಉದಾಹರಣೆಯೊಂದಿಗೆ ತಿಳಿಸಿದರು.

10 ಲಕ್ಷ ರೂ. ಲಾಭ : 2020, ಮಾರ್ಚ್ ಅಂತ್ಯಕ್ಕೆ ಕನಕ ಪಟ್ಟಣ ಸಹಕಾರ ಬ್ಯಾಂಕ್ 10.62 ಲಕ್ಷ ರೂ. ಲಾಭ ಗಳಿಸಿದೆ. 79.18 ಲಕ್ಷ ರೂ. ಷೇರು ಬಂಡವಾಳ, 85.17 ಲಕ್ಷ ರೂ. ಕಾಯ್ದಿಟ್ಟ ನಿಧಿ ಮತ್ತು ಇತರೆ ನಿಧಿಗಳಾಗಿದ್ದು,  14 ಕೋಟಿ  ರೂ. ಠೇವಣಿ ಸಂಗ್ರಹಿಸಿದೆ. ಸದಸ್ಯರ ವಿವಿಧ ಉದ್ದೇಶಗಳಿಗನುಗು ಣವಾಗಿ 11 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿದ್ದು, 16.86 ಲಕ್ಷ ರೂ. ದುಡಿಯುವ ಬಂಡವಾಳ ಹೊಂದಿದೆ ಎಂದು ಅವರು ಬ್ಯಾಂಕಿನ ಪ್ರಗತಿಯ ಪಕ್ಷಿ ನೋಟವನ್ನು ಸಂಕ್ಷಿಪ್ತ ಅಂಕಿ-ಅಂಶಗಳೊಂದಿಗೆ ವಿವರಿಸಿದರು.

ಬ್ಯಾಂಕಿನ ಸದಸ್ಯರಿಗೆ ಶೇ. 6 ರಂತೆ ಲಾಭಾಂಶ ನೀಡಲು ಬ್ಯಾಂಕಿನ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿತ್ತು. ಆದರೆ, ಕೋವಿಡ್ -19 ಕಾರಣದಿಂದಾಗಿ ಷೇರುದಾರರಿಗೆ ಲಾಭಾಂಶ ನೀಡದಂತೆ ಎಲ್ಲಾ ಸಹಕಾರಿ ಬ್ಯಾಂಕುಗಳಿಗೆ ತಡೆ ಹಿಡಿದು ಭಾರತೀಯ ರಿಸರ್ವ್ ಬ್ಯಾಂಕ್ ಮಾಡಿದ ಆದೇಶದ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕ್ ನೀಡಲುದ್ದೇಶಿಸಿದ್ದ ಲಾಭಾಂಶವನ್ನು ರಿಸರ್ವ್ ಫಂಡ್‌ಗೆ ವರ್ಗಾಯಿಸಲು ನಿರ್ಧರಿಸಲಾಗಿದೆ ಎಂದು ಸಿದ್ದಪ್ಪ ಅವರು ಹೇಳಿದರು.

ಕೃತಜ್ಞತೆ : ಸರ್ವತೋಮುಖ ಅಭಿವೃದ್ಧಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಈ ಬ್ಯಾಂಕ್ ಪ್ರಗತಿದಾಯಕವಾಗಿ ಮುನ್ನಡೆೆಯಲು ಬ್ಯಾಂಕಿನ ಸದಸ್ಯರು ಮತ್ತು ಠೇವಣಿದಾರರ ಪ್ರೋತ್ಸಾಹ ಹಾಗೂ ಸಹಕಾರ, ಸಿಬ್ಬಂದಿ ವರ್ಗದವರ ಪರಿಶ್ರಮ, ಆಡಳಿತ ಮಂಡಳಿಯ ಇಚ್ಛಾಶಕ್ತಿ ಕಾರಣವಾಗಿದೆ ಎಂದು ತಿಳಿಸಿದ ಸಿದ್ದಪ್ಪ ಅವರು, ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುತ್ತಿರುವ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.

ಗ್ರಾಹಕರ ಪಾತ್ರ ಪ್ರಮುಖ : ಬ್ಯಾಂಕಿನ ಮಾಜಿ ಅಧ್ಯಕ್ಷರೂ ಆದ ಹಾಲಿ ನಿರ್ದೇಶಕ ಪಿ. ರಾಜಕುಮಾರ್ ಮಾತನಾಡಿ, ಈ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಯಲ್ಲಿ  ಗ್ರಾಹಕರು ಮತ್ತು ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದೆ ಎಂದು ಸ್ಮರಿಸಿದರು.

ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಕೆ.ಜಿ. ತಾಯಮ್ಮ ಮಾತನಾಡಿ, ಬ್ಯಾಂಕಿನ ಪ್ರಗತಿಯಲ್ಲಿ ಗ್ರಾಹಕರ ಮತ್ತು ಸಹದಸ್ಯರ ಸಹಕಾರ ಹಾಗೂ ಪ್ರೋತ್ಸಾಹ ಇದೆ ಎಂದು ಧನ್ಯವಾದ ಹೇಳಿದರು.

ನಿರ್ದೇಶಕರುಗಳಾದ ಕೆ.ಎನ್. ನೀಲಪ್ಪ, ಆರ್. ಆನಂದ್, ಹೆಚ್.ಜಿ. ಸಂಗಪ್ಪ, ಚೌಡಪ್ಪ, ಎಸ್. ಸಂಗನಗೌಡ್ರು, ಕೆ. ಪರಶುರಾಮ್, ಕೆ.ಆರ್. ಭರಮಪ್ಪ,  ಬಿ. ದಿಳ್ಯಪ್ಪ, ಹೆಚ್.ಎಂ. ಗೋಣೆಪ್ಪ, ಎಸ್.ಹೆಚ್. ಕಾಂತರಾಜ್, ಟಿ.ಎಸ್. ಪ್ರಕಾಶ್, ಶ್ರೀಮತಿ ಕೆ. ಸುಧಾ, ಮಹಾದೇವಪ್ಪ, ಕೆ. ರೇವಣಸಿದ್ದಪ್ಪ ಮತ್ತಿತರರು  ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕರಾಗಿರುವ ಲೆಕ್ಕಾಧಿಕಾರಿ ದೇವಜ್ಜಿ ರಮೇಶ್ ಅವರು 2020-21 ನೇ ಸಾಲಿನ ಆಯ-ವ್ಯಯ ಮಂಡಿಸಿದರು.

error: Content is protected !!