ದಾವಣಗೆರೆ, ಡಿ. 25 – ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಆಯುಕ್ತ ಎ.ಕೆ. ರಾಯ್ ಅವರು ಹರಿಹರ ಮತ್ತು ದೇವರಗುಡ್ಡ ನಿಲ್ದಾಣಗಳ ನಡುವಿನ ರೈಲ್ವೆ ಡಬ್ಲಿಂಗ್ ಕಾಮಗಾರಿ ಪರಿಶೀಲನೆ ನಡೆಸಿದರು.
ಎರಡು ನಿಲ್ದಾಣಗಳ ನಡುವಿನ ಮಾರ್ಗದಲ್ಲಿ ತಿರುವುಗಳು, ಕೇಂದ್ರಗಳು ಹಾಗೂ ಕ್ರಾಸಿಂಗ್ಗಳ ಪರಿಶೀಲನೆ ನಡೆಸಲಾಯಿತು. ಪ್ರಯಾಣಿಕರಿಗೆ ಕಲ್ಪಿಸಲಾ ಗುತ್ತಿರುವ ಸೌಲಭ್ಯಗಳ ತಪಾಸಣೆಯನ್ನೂ ನಡೆಸ ಲಾಯಿತು ಎಂದು ರೈಲ್ವೆ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎರಡೂ ನಿಲ್ದಾಣಗಳ ನಡುವಿನ ಡಬ್ಲಿಂಗ್ ಯೋಜನೆಯ ವೆಚ್ಚ 298 ಕೋಟಿ ರೂ.ಗಳಾಗಿದೆ. ಈ ಮಾರ್ಗದಲ್ಲಿ ತುಂಗಭದ್ರಾ ನದಿಗೆ ಅಡ್ಡವಾಗಿ ಪ್ರಮುಖ ಸೇತುವೆಯನ್ನು ನಿರ್ಮಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿಗಳಾದ ಕೆ.ಸಿ. ಸ್ವಾಮಿ, ರಾಹುಲ್ ಅಗರ್ವಾಲ್, ನಾರಾಯಣ ರಾವ್, ಶ್ರೀನಿವಾಸ್, ಶಾಂತಿರಾಮ್ ಮತ್ತಿತರರು ಉಪಸ್ಥಿತರಿದ್ದರು.