ದಾವಣಗೆರೆ,ಡಿ.24- ನಗರದ ಶ್ರೀ ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಕೃಪಾಪೋಷಿತ ಶ್ರೀ ವಿನಾಯಕ ಎಜುಕೇಷನ್ ಟ್ರಸ್ಟ್ ಆಡಳಿತ ಮಂಡಳಿ ಗೌರವ ಕಾರ್ಯದರ್ಶಿಯಾಗಿ ಎನ್.ಎ. ಮುರುಗೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶ್ರೀಶೈಲ ಪೀಠದ ಜಗದ್ಗುರು ಶ್ರೀ ಡಾ. ಚನ್ನಸಿದ್ದರಾಮ ಪಂಡಿತಾರಧ್ಯರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಟ್ರಸ್ಟ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಕೆ.ಎಂ. ಹೊಳಿಯಪ್ಪ, ಎಂ.ಹೆಚ್. ನಿಜಾನಂದ, ಬಿ.ಸಿ. ಉಮಾಪತಿ, ಸುಗಂಧರಾಜ ಶೆಟ್ರು, ಆರ್. ವೆಂಕಟರೆಡ್ಡಿ, ಆರ್. ರಮಾನಂದ, ಬಿ.ವಿ. ಮಹೇಶ್ ಚಂದ್ರ ಬಾಬು, ಬಿ.ಸಿ. ಶಿವಕುಮಾರ್, ಎಸ್.ಕೆ. ವೀರಣ್ಣ ಅವರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
February 24, 2025