ದಾವಣಗೆರೆ, ಡಿ.24 – ಕರ್ನಾಟಕ ರಾಜ್ಯ ಶಿಕ್ಷಕ ಪ್ರತಿಭಾ ಪರಿಷತ್ (ಮೈಸೂರು) ಕೊಡಮಾಡುವ `ಗುರುಭೂಷಣ ರಾಜ್ಯ ಪ್ರಶಸ್ತಿ’ಗೆ ಭಾಜನರಾಗಿ ರುವ ಇಲ್ಲಿನ ಯಲ್ಲಮ್ಮ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಸಹ ಶಿಕ್ಷಕಿ ಶ್ರೀಮತಿ ಎಸ್. ಮಂಜುಳಾ ಬಸವನಗೌಡ ಪಾಟೀಲ್ ಅವ ರನ್ನು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನಿಸಲಾಯಿತು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ತಯಾಜ್ ಅಹ್ಮದ್, ಬಿ.ಆರ್.ಪಿ. ಕರಿಬಸಪ್ಪ, ಮುಖ್ಯ ಶಿಕ್ಷಕಿ ಶಾತಾಜ್ ಬಾನು, ವಿನೋಬನಗರ ಶಾಲೆಯ ಮುಖ್ಯ ಶಿಕ್ಷಕಿ ಶೋಭಾ, ಉರ್ದು ಶಾಲೆ ಸಹ ಶಿಕ್ಷಕರಾದ ನಾಜೀಮ ಖಾನಂ, ಶಾಹಿನ ಪರ್ವಿನ್, ಸೈರಾ ಬಾನು, ನೂರ್ ಆಯಿಷಾ ಮತ್ತಿತರರು ಉಪಸ್ಥಿತರಿದ್ದರು
January 4, 2025