ಅಭಿವೃದ್ಧಿಯತ್ತ ಹರ ವಿವಿಧೋದ್ದೇಶ ಸೌಹಾರ್ದ ಸಹಕಾರಿ : ಅಧ್ಯಕ್ಷ ಉಮಾಪತಿ

ದಾವಣಗೆರೆ, ಡಿ.23- ನಗರದ ಹರ ವಿವಿಧೊದ್ದೇಶ ಸೌಹಾರ್ದ ಸಹಕಾರಿಯು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, 2019-20ನೇ ಸಾಲಿನ ಆರ್ಥಿಕ ವರ್ಷದ ಅಂತ್ಯಕ್ಕೆ 34.51 ಲಕ್ಷ ರೂ.ಗಳ  ನಿವ್ವಳ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 10 ರಷ್ಟು ಷೇರು ಲಾಭಾಂಶವನ್ನು ಘೋಷಣೆ ಮಾಡಿದೆ  ಎಂದು ಅಧ್ಯಕ್ಷ  ಬಿ.ಸಿ.ಉಮಾಪತಿ ಹರ್ಷ ವ್ಯಕ್ತಪಡಿಸಿದರು. 

ನಗರದ ಡಾ.ಸದ್ಯೋಜಾತ ಶಿವಚಾರ್ಯ ಮಹಾಸ್ವಾಮಿಗಳವರ ಮಠದ ಸಭಾಂಗಣದಲ್ಲಿ ಸಹಕಾರಿಯ 8ನೇ ವರ್ಷದ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೊರೊನಾ ಸಂಕಷ್ಟದಲ್ಲೂ  ಸಹಕಾರಿಯ ಠೇವಣಿ ಸಂಗ್ರಹ ಹಾಗೂ ಸಾಲ ವಸೂಲಾತಿಯಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಇದಕ್ಕೆ ಸದಸ್ಯರ ಸಹಕಾರ ಪ್ರಮುಖ ಕಾರಣ ಎಂದು ತಿಳಿಸಿದರು. 

ಸಹಕಾರಿಯು ಷೇರು ಸಂಗ್ರಹಣೆಯಲ್ಲೂ ಗಮನಾರ್ಹ ಪ್ರಗತಿ  ಕಂಡಿದ್ದು,  ಕಳೆದ ಸಾಲಿನಲ್ಲಿ 92.40 ಲಕ್ಷ ರೂ. ಷೇರು ಬಂಡವಾಳವಿದ್ದು ಆರ್ಥಿಕ ವರ್ಷಾಂತ್ಯಕ್ಕೆ 1.01 ಕೋಟಿ ಷೇರು ಬಂಡವಾಳ ಹೊಂದಿದೆ. ಕಳೆದ ಸಾಲಿನಲ್ಲಿ 7.74 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ವರ್ಷಾಂತ್ಯಕ್ಕೆ 8.49 ಕೋಟಿ ರೂ ಗಳ ಠೇವಣಿ ಸಂಗ್ರಹವಾಗಿದೆ. ಪ್ರಸ್ತುತ ಸಹಕಾರಿ  7.80 ಕೋಟಿ ರೂ.ಗಳ ಸಾಲವನ್ನು  ಸದಸ್ಯರಿಗೆ ವಿತರಿಸಿದೆ ಎಂದು ತಿಳಿಸಿದರು.

ಇತ್ತೀಚೆಗೆ ನಿಧನರಾದ ಸಹಕಾರಿಯ ನಿರ್ದೇಶಕ ದಿ.ಹದಡಿ ನಟರಾಜ್, ಕಾರ್ಯದರ್ಶಿ ಕೆ.ಎಂ.ತೋಟದ್ ಅವರುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

ಶ್ರೀಮತಿ ಗೀತಾ ಪ್ರಶಾಂತ್  ಆಹ್ವಾನ ಪತ್ರಿಕೆಯನ್ನು ಸಭೆಯ ಮುಂದೆ ಮಂಡಿಸಿದರು.  ನಿರ್ದೇಶಕ  ರವಿಕುಮಾರ್  ಪಿ.ವಿ. ಕಳೆದ ಸಾಲಿನ ಸಾಮಾನ್ಯ ಸಭೆಯ ನಡಾವಳಿ ಓದಿದರು. ಜಿ.ವಿ. ಸುಂಕದ್, ಆಡಳಿತ ವರದಿ ಮಂಡಿಸಿದರು.  ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ್ ಕೆ. ಪಾಲನಾ ವರದಿಯನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದರು.  ಉಪಾಧ್ಯಕ್ಷ  ಎಂ.ದೊಡ್ಡಪ್ಪ ಅವರು,  ಲಾಭ ವಿಲೇವಾರಿಯ ಬಗ್ಗೆ ತಿಳಿಸಿ ಶೇ.10ರಷ್ಟು ಷೇರು ಲಾಭಾಂಶ ಘೋಷಿಸಿದರು. ಸಹಕಾರ್ಯದರ್ಶಿ ಎಂ. ಮಲ್ಲಿಕಾರ್ಜುನ್ ಮುಂಗಡ ಪತ್ರ ಮಂಡಿಸಿದರು.  ನಿರ್ದೇಶಕ  ಅಂದನೂರು ಮುರುಗೇಶಪ್ಪ ವಾರ್ಷಿಕ ಕಾರ್ಯಚರಣೆ ಯೋಜನೆ ಮಂಡಿಸಿದರು.

ನಿರ್ದೇಶಕರುಗಳಾದ  ಮಲ್ಲನಗೌಡ ಎಸ್., ಹೆಚ್.ಎಸ್.ಅವ್ವಣ್ಣಪ್ಪ, ಚಂದ್ರಶೇಖರ್ ಬಾದಾಮಿ. ಶ್ರೀಮತಿ ವಿನುತಾ ಎಂ.ವಿ.,  ವಿಶೇಷ ಆಹ್ವಾನಿತರಾದ ಎಸ್.ಮಂಜುನಾಥ್ ಉ ಪಸ್ಥಿತರಿದ್ದರು.  ಹಾಲೇಶ ಅಂಗಡಿ ವಂದಿಸಿದರು.  ಅಂಗಡಿ ಸಂಗಮೇಶ್,  ಕಲಿವೀರ ಕಳ್ಳಿಮನಿ ನಿರೂಪಿಸಿದರು.

error: Content is protected !!