ದೆಹಲಿಯಲ್ಲಿನ ರೈತರ ಹೋರಾಟಕ್ಕೆ ಬೆಂಬಲ

ಹುಟ್ಟುಹಬ್ಬದ ದಿನ ವಕೀಲ ಅನೀಸ್ ಪಾಶ ಉಪವಾಸ ಸತ್ಯಾಗ್ರಹ

ದಾವಣಗೆರೆ, ಡಿ.23- ಪ್ರಗತಿಪರ ಚಿಂತಕ, ವಕೀಲ ಅನೀಸ್ ಪಾಶ ಅವರು ತಮ್ಮ 52ನೇ ವರ್ಷದ ಹುಟ್ಟುಹಬ್ಬವನ್ನು ಹಾಗೂ ರೈತರ ದಿನಾ ಚರಣೆಯನ್ನು ದೆಹಲಿಯಲ್ಲಿನ ರೈತರ ಹೋರಾಟ ಬೆಂಬಲಿಸಿ, ನಗರದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸುವ ಮುಖೇನ ವಿಭಿನ್ನ ರೀತಿಯಲ್ಲಿ ಸಮರ್ಪಣೆ ಮಾಡಿದರು. 

ಜಯದೇವ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರಲ್ಲದೇ, ದೆಹಲಿಯಲ್ಲಿ ಚಳಿಯನ್ನು ಲೆಕ್ಕಿಸದೆ ಹೋರಾಟ ಮಾಡುತ್ತಿರುವ ರೈತರಿಗೆ ರಗ್ಗು, ಬೆಡ್‍ಶೀಟ್, ಶಾಲ್ ಮತ್ತು ಟೋಪಿಗಳನ್ನು ವಿವಿಧ ಸಂಘಟನೆಗಳ ಸಹಯೋಗದಲ್ಲಿ ಉಡುಗೊರೆಯಾಗಿ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದಲ್ಲಿ ರೈತರು ಸಂಕಷ್ಟದಲ್ಲಿದ್ದು, ರೈತರ ಒಳತಿ ಗಾಗಿ ಕಾನೂನು ತಂದಿದ್ದೇವೆ ಎಂದು ಸರ್ಕಾರ ಗಳು ಮೂಗಿಗೆ ತುಪ್ಪ ಸವರುವ ಕೆಲಸ ಮಾಡು ತ್ತಿವೆ. ಯಾವುದೇ ಕಾನೂನು ಜಾರಿಗೊಳಿಸುವ ಪೂರ್ವದಲ್ಲಿ ಅದರ ಆಗು-ಹೋಗುಗಳನ್ನು ದೇಶಾದ್ಯಂತ ಕೂಲಂಕುಶವಾಗಿ ಚರ್ಚಿಸಿ, ರೈತರ ಸಲಹೆಗಳನ್ನು ಪಡೆದು ಸಂಸತ್ತಿನಲ್ಲಿ ಚರ್ಚೆ ನಡೆದ ನಂತರ ಅದನ್ನು ಮಂಡಿಸಲಾಗುತ್ತದೆ. ಆದರೆ, ಈ ನಿಯಮದ ವಿರುದ್ಧವಾಗಿ ಏಕಾಏಕಿ ಕಾನೂ ನುಗಳನ್ನು ಜಾರಿಗೊಳಿಸಿ, ಆ ನಂತರದಲ್ಲಿ ಒತ್ತಡ ಹೇರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಸರ್ವೋಚ್ಚ ನ್ಯಾಯಾಲಯವು ಕೂಡ ರೈತರ ನೋವನ್ನು ಅರ್ಥ ಮಾಡಿಕೊಳ್ಳದೆ ಆ ಕಾನೂನಿಗೆ ತಡೆಯನ್ನು ನೀಡದೆ ಜನವರಿ ತಿಂಗಳಿಗೆ ಮುಂದೂಡಿರುವುದು ಆಶ್ಚರ್ಯಕರ ಮತ್ತು ನೋವಿನ ಸಂಗತಿ. ಹಾಗಾಗಿ ಸವೋಚ್ಚ ನ್ಯಾಯಾಲಯ ಈ ವಿಷಯದಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದು ಹೇಳಿದರು.

ರೈತ ಮುಖಂಡರುಗಳಾದ ತೇಜಸ್ವಿ ಪಟೇಲ್‍ ಹಾಗೂ ಹುಚ್ಚವ್ವನಹಳ್ಳಿ ಮಂಜುನಾಥ್‍ ಮಾತನಾಡಿ, ದೆಹಲಿಯಲ್ಲಿ ಹೋರಾಟ ಮಾಡುತ್ತಿರುವ ರೈತರಿಗೆ ವಿಭಿನ್ನ ರೀತಿಯಲ್ಲಿ ಸರ್ಕಾರಗಳು ತೊಂದರೆ ಮಾಡಿ, ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಈ ಕಾಯ್ದೆಗಳನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಪ್ರೊ. ಎ.ಬಿ. ರಾಮಚಂದ್ರಪ್ಪ, ರಾಜ್ಯ ಜೆಡಿಎಸ್ ವಕ್ತಾರ ಜಸ್ಟೀನ್ ಜಯಕುಮಾರ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್.ಸಿ. ಗುಡ್ಡಪ್ಪ, ನಾಗೇಂದ್ರಪ್ಪ, ಅರುಣ್, ಮಂಜುನಾಥ್, ಜನಶಕ್ತಿಯ ಸತೀಶ್ ಅರವಿಂದ್, ಆದಿಲ್ ಖಾನ್, ಪರಿಸರ ಸಂರಕ್ಷಣೆಯ ಗಿರೀಶ್ ದೇವರಮನೆ, ನಾವು ಭಾರತೀಯರು ಸಂಘಟನೆಯ ಟಿ. ಅಸ್ಗರ್, ಕರಿಬಸಪ್ಪ, ಜಬೀನಾ ಖಾನಂ, ಡೋಲಿ ಚಂದ್ರು, ಜಮಾತೆ ಇಸ್ಲಾಮಿನ ಅಯೂಬ್, ಮುಸ್ಲಿಂ ಲೀಗ್‍ನ ಅತಾವುಲ್ಲಾ, ಶ್ರೀಧರ್ ಪಾಟೀಲ್, ಹಿದಾಯತ್ ಖಾನ್, ಇಂಡಿಯನ್ ಹೆಲ್ಪಿಂಗ್ ಹ್ಯಾಂಡ್‍ನ ರಹಮತ್, ಜಬ್ಬಾರ್, ಖಲೀಲ್, ಟಿ. ಪರಶುರಾಮ್, ಹನೀಫ್ ಸಿ. ಸಿರಾಜುದ್ದೀನ್, ಮುಸ್ತಾಫಾ, ಇರ್ಫಾನ್, ಶಮೀಮ್ ಪಾಶ, ಮುನ್ನಾ, ಹಯಾತ್, ಚಂದ್ರು, ಅನಿಲ್ ಕುಮಾರ್, ಬಕ್ಷಿ, ಅಶ್ರಫ್, ಇಮ್ತಿಯಾಜ್ ಸೇರಿದಂತೆ ಇತರರಿದ್ದರು.

error: Content is protected !!