ದಾವಣಗೆರೆ, ಡಿ.22- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಸಮಾಜದಿಂದ ಶಾಂತಿಯುತ ಹೋರಾಟ ನಡೆಯುತ್ತಿದ್ದು, ಬೇಡಿಕೆಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಕ್ರಾಂತಿಯುತ ಹೋರಾಟಕ್ಕೆ ಸರ್ಕಾರವೇ ಹೊಣೆಯಾಗಲಿದೆ ಎಂದು ಕೂಡಲ ಸಂಗಮದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.
ಶ್ರೀಗಳ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ರಕ್ತದಾಸೋಹ ಕಾರ್ಯಕ್ರಮ ವಿದ್ದು, ಇದಕ್ಕೆ ನಗರದ ಸದ್ಯೋಜಾತ ಶಿವಾಚಾರ್ಯ ಮಂದಿರದಲ್ಲಿ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲೆಯಿಂದ ರಕ್ತ ದಾಸೋಹ ಕಾರ್ಯಕ್ರಮ ವನ್ನು ಪಾಲಿಕೆ ಮೇಯರ್ ಬಿ.ಜಿ. ಅಜಯ್ ಕುಮಾರ್ ರಕ್ತದಾನ ಮಾಡುವುದರ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಕಳೆದ 20 ವರ್ಷಗಳಿಂದ ಆಡಳಿತ ಮಾಡಿದ ಎಲ್ಲಾ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟು, ಸನ್ಮಾನಿಸಿ ಗೌರವಿಸಿ ಸಾಕಾಗಿದೆ. ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ಮಾಡಿದ್ದೇವೆ. ಇದೀಗ ರಕ್ತ ದಾಸೋಹ ಮೂಲಕ ರಾಜ್ಯಾದ್ಯಂತ ಹೋ ರಾಟ ಮಾಡುತ್ತಿದ್ದೇವೆ. ಇದೀಗ ನಮ್ಮದು ಹೋರಾಟದ ಮೂಲಕವೇ ಸಮಾಜದ ಏಳಿಗೆಗಾಗಿ 2 ಎ ಮೀಸಲಾತಿ ಪಡೆಯಬೇ ಕಿದೆ. ನಮ್ಮ ಸಮಾಜಕ್ಕೆ ಮನವಿ, ಗೌರವ ನೀಡುವುದರ ಜೊತೆಗೆ ಮನಸ್ಸು ಮಾಡಿದರೆ ಮೀಸಲಾತಿ ಪಡೆಯುವ ಸಾಮರ್ಥ್ಯವನ್ನು ಕೂಡ ಪಾದಯಾತ್ರೆ ಮುಖೇನ ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.
ಮೀಸಲಾತಿ ವಿಚಾರವಾಗಿ ಜನವರಿ 14ರಿಂದ ಕೂಡಲ ಸಂಗಮದಿಂದ ಬೆಂಗಳೂ ರಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಜಯಮೃತ್ಯುಂಜಯ ಶ್ರೀಗಳಿಗೆ ಪುಷ್ಪವೃಷ್ಠಿ
ಜನ್ಮ ದಿನದ ಅಂಗವಾಗಿ ಜಯ ಮೃತ್ಯುಂಜಯ ಶ್ರೀಗಳಿಗೆ ಭಕ್ತರು, ಸಮಾಜದ ಮುಖಂಡರು ಸುಮಾರು 30 ಕೆಜಿಯಷ್ಟು ಸೇವಂತಿಗೆ ಪುಷ್ಪ ಸುರಿಸಿ ಅದರಲ್ಲೇ ಸ್ವಾಮೀಜಿ ಅವರನ್ನು ಮಿಂದೇಳಿಸುವ ಮೂಲಕ ತಮ್ಮ ಭಕ್ತಿ ಸಮರ್ಪಿಸುವುದರೊಂದಿಗೆ ಜನ್ಮ ದಿನದ ಶುಭ ಕೋರಿದರು. ಭಕ್ತರ ಅಪೇಕ್ಷೆ ಮೇರೆಗೆ ಶ್ರೀಗಳು ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಹರಿಹರ ಪಂಚಮಸಾಲಿ ಪೀಠ ಹಾಗೂ ಕೂಡಲ ಸಂಗಮ ಪೀಠ 2 ಎ ಮೀಸಲಾತಿ ಯಲ್ಲಿ ಒಂದಾಗಿ ಹೋರಾಟ ಮಾಡುತ್ತಿದ್ದೇವೆ ನಾವು ಬೀದಿಗಳಿದು ಹೋರಾಟ ಮಾಡುತ್ತಿದ್ದೇವೆ. ಹರಿಹರದ ಪೀಠವು ಮನವಿ ನೀಡುವ ಮೂಲಕ ಹೋರಾಟ ಮಾಡುತ್ತಿದೆ. ನಾವು ರಕ್ತ ದಾಸೋಹದ ಮೂಲಕ ಸರ್ಕಾರಕ್ಕೆ ಮೀಸಲಾತಿಯ ಒತ್ತಾಯದ ಜೊತೆಗೆ ಅಮೂಲ್ಯವಾದ ಜೀವ ಉಳಿಸುವ ಕಾರ್ಯ ಮಾಡುತ್ತಿದ್ದೇವೆ. ಬುಧವಾರದಿಂದ ರಾಜ್ಯಾದ್ಯಂತ ಆಯಾ ಜಿಲ್ಲಾ ಕೇಂದ್ರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಭಕ್ತರು ರಕ್ತದಾನ ಮಾಡಲಿದ್ದಾರೆ ಎಂದು ಹೇಳಿದರು.
ಚನ್ನಪ್ಪ ಕುಂಟೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಲಿಂಗಾಯತ ಪಂಚಮಸಾಲಿ ಸಮಾಜ ಯುವ ಘಟಕ ಉಸ್ತುವಾರಿ ಶ್ರೀಧರ್ ಪಾಟೀಲ್, ಹೆಚ್.ಸಿ. ಜಯಮ್ಮ, ಉಮೇಶ್, ಸುಭಾಷ್ ಚಂದ್ರ, ಗೋಪನಾಳ್ ಅಶೋಕ್ ಕುಮಾರ್, ರುದ್ರಮ್ಮ ಮಲ್ಲಿಕಾರ್ಜುನ್, ಹಗಡಿ ಚನ್ನಬಸಪ್ಪ, ಜಿಲ್ಲಾಸ್ಪತ್ರೆ ರಕ್ತ ಭಂಡಾರದ ಡಾ. ಗೀತಾ, ನಾಗರಸನಹಳ್ಳಿ ಬಸವರಾಜು, ವಿರೂಪಾಕ್ಷಪ್ಪ, ಅಶೋಕ್, ಪ್ರಭುದೇವ್, ಗುಜರಿ ವಿಜಯ್ ಕುಮಾರ್, ತಣಿಗೆರೆ ಶಿವಕುಮಾರ್, ಒಣ ರೊಟ್ಟಿ ಮಹಾಂತೇಶ್, ಸುಭಾಷ್, ಕೆ.ವಿ. ಚೇ ತನ್, ಶಿವಣ್ಣ, ಬಸವಾಪುರ ಶಶಿಧರ್ ಮತ್ತಿ ತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಭು ಕಲ್ಬುರ್ಗಿ ನಿರೂಪಿಸಿದರು. ಗಂಗಾಧರ್ ಕಾರಿಗನೂರು ಸ್ವಾಗತಿಸಿದರು.