ಬಾಕಿ ವೇತನ ಪಾವತಿಗೆ ಆಗ್ರಹ

ಆರೋಗ್ಯ ಕೇಂದ್ರದ ಹೊರಗುತ್ತಿಗೆ ‘ಡಿ’ಗ್ರೂಪ್ ನೌಕರರ ಪ್ರತಿಭಟನೆ

ದಾವಣಗೆರೆ, ಡಿ.15- 9 ತಿಂಗಳ ಬಾಕಿ ವೇತನ ಪಾವತಿಗಾಗಿ ಆಗ್ರಹಿಸಿ ಜಿಲ್ಲೆಯ ಆರೋಗ್ಯ ಕೇಂದ್ರದ ಹೊರಗುತ್ತಿಗೆ `ಡಿ¬ ಗ್ರೂಪ್ ನೌಕರರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾ ಖೆಯ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ನೌಕರರು, ಪ್ರತಿಭಟನಾ ಧರಣಿ ನಡೆಸಿ, ನಂತರ ಬೇಡಿಕೆಗಳ ಈಡೇರಿಕೆಗೆ ಡಿಹೆಚ್ ಓ ಅವರಿಗೆ ಮನವಿ ಸಲ್ಲಿಸಿದರು.

ಜಿಲ್ಲೆಯ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಹೊರಗುತ್ತಿಗೆ `ಡಿ¬ ಗ್ರೂಪ್ ನೌಕರರು ಯಾವುದೇ ವಾರದ ರಜೆ ಇಲ್ಲದೇ, ರೋಗಿಗಳ ಹಾಗೂ ಶಂಕಿತರ ಉಸ್ತುವಾರಿ ನೋಡಿಕೊಳ್ಳಲು ಸರಿಯಾದ ಸುರಕ್ಷಿತ ಸಾಮಗ್ರಿಗಳಿಲ್ಲದೇ ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿದ್ದಾರೆ. ಇದುವರೆಗೂ ಯಾವುದೇ ಕೋವಿಡ್-19ರ ವಿಶೇಷ ಭತ್ಯೆ ಇಲ್ಲ ಹಾಗೂ ಮಾರ್ಚ್ ತಿಂಗಳಿಂದಲೂ ವೇತನ ಪಾವತಿಯಾಗಿಲ್ಲ ಎಂದು ಪ್ರತಿಭಟನಾಕಾರರು ಅಳಲಿಟ್ಟರು.

ಸರಿಯಾಗಿ ಇಎಸ್ ಐ-ಪಿಎಫ್ ಸಹ ಕಟ್ಟಿಲ್ಲ. ಇಂತಹ ಸಂದರ್ಭದಲ್ಲಿ ದಿನ ನಿತ್ಯದ ಜೀವನ ನಡೆಸು ವುದು ನಮಗೆ ಕಷ್ಟವಾಗುತ್ತಿದೆ. ಈ ಬಗ್ಗೆ ಈಗಾಗಲೇ ಡಿಹೆಚ್ ಓ ಅವರಿಗೆ ಮನವಿ ಮಾಡಲಾಗಿದೆ. ಆದರೂ ಸಹ ಯಾವುದೇ ಪ್ರಯೋಜವಾಗಿಲ್ಲ. 9 ತಿಂಗಳಿನಿಂದ ಸಂಬಳವಿಲ್ಲದೇ ದಿನಸಿ ಅಂಗಡಿ, ಸಾಲಗಾರರು, ಸಂಘ-ಸಂಸ್ಥೆಗಳಲ್ಲಿ ಸಾಲ ಪಡೆದಿದ್ದು,  ಅವರುಗಳು ಮನೆ ಬಾಗಿಲಿಗೆ ಬಂದು ಸಾಲ ಮರುಪಾತಿಸುವಂತೆ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಜೀವನ ನಡೆಸಲು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲೆಯ ಆರೋಗ್ಯ ಕೇಂದ್ರದ ಹೊರಗುತ್ತಿಗೆ `ಡಿ¬ ಗ್ರೂಪ್ ನೌಕರರ ಸಂಘದ ಅಧ್ಯಕ್ಷ ಹೆಚ್.ಬಿ. ಮಂಜುನಾಥ, ಕೆ. ಕುಮಾರಸ್ವಾಮಿ, ಮನೋಜ್ ಸೇರಿದಂತೆ ನೂರಾರು ನೌಕರರು ಭಾಗವಹಿಸಿದ್ದರು.

error: Content is protected !!