ಹರಪನಹಳ್ಳಿ, ಡಿ.8- ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ತಿದ್ದುಪಡಿಗಳ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಹಾಗೂ ವಿವಿಧ ಪ್ರಗತಿ ಪರ ಸಂಘಟನೆಗಳು ಕರೆ ನೀಡಿರುವ ಭಾರತ ಬಂದ್ ಹರಪನಹಳ್ಳಿಯಲ್ಲಿ ಯಶಸ್ವಿಯಾಯಿತು.
ಔಷಧಿ ಅಂಗಡಿಗಳು, ಸರ್ಕಾರಿ ಕಚೇರಿಗಳು, ಕೆಲವೊಂದು ಖಾಸಗಿ ವಾಹನಗಳು ಓಡಾಟ ನಡೆಸಿದ್ದರೆ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಮುಚ್ಚಲ್ಪಟ್ಟಿದ್ದವು. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಬೈಕ್‌ಗಳ ಮೇಲೆ ಪಟ್ಟಣದ ವಿವಿಧೆಡೆ ಸಂಚರಿಸಿ ಬಂದ್‌ಗೆ ಸಹಕರಿಸಲು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಎಂ.ಪಿ.ಪ್ರಕಾಶ್, ಸಮಾಜಮುಖಿ ಟ್ರಸ್ಟ್ ಅಧ್ಯಕ್ಷೆ ಎಂ.ಪಿ.ವೀಣಾ ಮಹಂತೇಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ಸಮಾಜವಾದಿ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಡಿ.ಮಂಜಪ್ಪ ಮಾಡ್ಲಗೇರಿ, ವಿವಿಧ ಸಂಘಟನೆಗಳ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಟಿ.ವಿ.ರೇಣುಕಮ್ಮ, ಇದ್ಲಿ ರಾಮಪ್ಪ, ಸಂದೇರ ಪರಶುರಾಮ, ಶೃಂಗಾರತೋಟದ ಬಸವರಾಜ್, ದ್ಯಾಮಜ್ಜಿ ಹನುಮಂತಪ್ಪ, ಗೌರಿಹಳ್ಳಿ ಹನುಮಂತಪ್ಪ, ಎಚ್.ಎಂ. ಸಂತೋಷ್, ಪುರಸಭಾ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ಶ್ರೀಕಾಂತ್ ಯಾದವ್, ಮಾಲತೇಶನಾಯ್ಕ, ಅರುಣ ಪೂಜಾರ, ಕಲ್ಲಹಳ್ಳಿ ಗೋಣೆಪ್ಪ, ಎ.ಡಿ.ದ್ವಾರಕೇಶ್, ಕುಂಚೂರು ಶಫಿವುಲ್ಲಾ ಹಾಗು ಇತರರು ಪಾಲ್ಗೊಂಡಿದ್ದರು.