ಹರಪನಹಳ್ಳಿಯಲ್ಲಿ ನಡೆದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಬಣ್ಣನೆ
ಹರಪನಹಳ್ಳಿ, ಡಿ.7- ದೇಶದ ಗಡಿಯನ್ನು ಸೈನಿಕರು ಕಾಯುವಂತೆ ಸಮಾಜದ ಹಿತವನ್ನು ಕಾಯುತ್ತಿರುವ ವಕೀಲರ ವೃತ್ತಿ ಕಲ್ಪವೃಕ್ಷವಿದ್ದಂತೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಮಂಜುಳಾ ಶಿವಪ್ಪ ಉಂಡಿ ಬಣ್ಣಿಸಿದ್ದಾರೆ.
ಪಟ್ಟಣದ ವಕೀಲರ ಸಂಘದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಕೀಲ ವೃತ್ತಿಯಲ್ಲಿ ಮಾತ್ರ ಎಲ್ಲಾ ರೀತಿಯ ಮಾನದಂಡಗಳ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯ. ವೃತ್ತಿ ಘನತೆ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ವಕೀಲರ ಆದ್ಯ ಕರ್ತವ್ಯವಾಗಿದ್ದು, ಯುವ ವಕೀಲರುಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಮಾಸಿಕ ವೇತನ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಯುವ ವಕೀಲರು ಗಳು ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು ಎಂದರು.
ಕಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಜಿ. ಶೋಭ ಮಾತನಾಡಿ, ಸಮಾಜದ ಏಳಿಗೆಗಾಗಿ ಶ್ರಮಿಸುವವರಲ್ಲಿ ವಕೀಲರ ಪಾತ್ರ ದೊಡ್ಡದಿದೆ.
ಕಪ್ಪು ಕೋಟ್‌ಗೆ ಹೆಚ್ಚಿನ ಗೌರವವಿದ್ದು, ವಕೀಲರು ವೃತ್ತಿ ಘನತೆ ಕಾಪಡಿಕೊಳ್ಳಿ. ಇತ್ತೀಚಿನ ದಿನಮಾನಗಳಲ್ಲಿ ಸೈಬರ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ವಕೀಲರು ಹೆಚ್ಚು ಅಧ್ಯಯನ ಮಾಡಬೇಕು ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ. ಚಂದ್ರೇಗೌಡ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಹಾಗೂ ಹಿರಿಯ ನ್ಯಾಯವಾದಿ ಬಿ. ಕೃಷ್ಣ ಮೂರ್ತಿ ಮಾತನಾಡಿದರು. ವಕೀಲರ ಸಂಘದ ಕಾರ್ಯದರ್ಶಿ ಕೆ. ಬಸವರಾಜ್, ವಕೀಲರುಗಳಾದ ಗಂಗಾಧರ್ ಗುರುಮಠ್, ಚಿಗಟೇರಿ ವೀರಣ್ಣ, ಕೆ. ಜಗದೀಶಗೌಡ. ಕೆ. ಪ್ರಕಾಶ, ವಿ.ಜಿ.ಪ್ರಕಾಶಗೌಡ, ಕೆ. ಉಚ್ಚೆಂಗೆಪ್ಪ, ಬಂಡ್ರಿ ಗೋಣಿಬಸಪ್ಪ, ಕೆಂಗಳ್ಳಿ ಪ್ರಕಾಶ, ಎಂ. ಮೃತ್ಯುಂಜಯ, ಎಸ್.ಜೆ. ತಿಪ್ಪೇಸ್ವಾಮಿ, ಮುತ್ತಿಗಿ ಮಂಜುನಾಥ, ರೇವಣಸಿದ್ಧಪ್ಪ, ಬೇಲೂರು ಸಿದ್ದೇಶ್, ಡಿ. ಹನುಮಂತಪ್ಪ, ನಂದೀಶ್ ನಾಯ್ಕ, ಒ. ಮುಜಿಬುರ್ ಹಾಗು ಇನ್ನಿತರರಿದ್ದರು.