ಜಗಳೂರು, ನ.29- ಕರ್ನಾಟಕ ರಾಜ್ಯದ ಕಾಡುಗೊಲ್ಲರನ್ನು ಎಸ್ಟಿಗೆ ಸೇರಿಸಲು ಹಾಗೂ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕಕ್ಕೆ ಆಗ್ರಹಿಸಿ ಜಗಳೂರು ತಾಲ್ಲೂಕಿನ ಕಾಡುಗೊಲ್ಲರು, ಕಾರ್ಯಕ್ರಮದ ನಿಮಿತ್ತ ಚಳ್ಳಕೆರೆಗೆ ಆಗಮಿಸಿದ್ದ ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಮನವಿ ಸಲ್ಲಿಸಿದರು.
ಬುಡಕಟ್ಟು ಸಮುದಾಯಕ್ಕೆ ಸೇರಿದ ಕಾಡುಗೊಲ್ಲರು ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದುಳಿದಿದ್ದೇವೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಬೆಳೆಯಬೇಕಾ ಗಿದೆ. ಆದ್ದರಿಂದ ಕಾಡುಗೊಲ್ಲರನ್ನು ಎಸ್.ಟಿ.ಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು, ನಮ್ಮ ಧ್ವನಿಯಾಗಿ ಕೆಲಸ ಮಾಡ ಬೇಕು ಎಂದು ಕಾಡುಗೊಲ್ಲ ಎಸ್‍ಟಿ ಮೀಸ ಲಾತಿ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದರು.
ಸಂಸದ ಪ್ರತಾಪಸಿಂಹ ಮಾತನಾಡಿ, ಶಿರಾ ಉಪ ಚುನಾವಣೆಯ ಸಂದರ್ಭದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಮಾತು ಕೊಟ್ಟಿದ್ದೇನೆ. ಅದ ರಂತೆ ಮುಂದಿನ ಕ್ಯಾಬಿನೆಟ್‍ನಲ್ಲಿ ಚರ್ಚಿಸಲು ವರಿಷ್ಠರೊಂದಿಗೆ ಚರ್ಚಿ ಸಲಾಗುವುದು ಸಾಧ್ಯವಾದರೆ ದೆಹಲಿಗೆ ನಿಯೋಗ ಕರೆದುಕೊಂಡು ಹೋಗುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಎಸ್‍ಟಿ ಮೀಸಲಾತಿ ಸಮಿತಿಯ ಹರೀಶ್ ಬಾಲೇಹಳ್ಳಿ, ಇಂದ್ರೇಶ್, ಆದರ್ಶ, ಜನಾರ್ದನ್,
ಹೆಚ್.ಎಂ ಹೊಳೆ ಮಹಾಲಿಂಗಪ್ಪ,
ಚಿತ್ತಯ್ಯ, ಸುಜಯ್, ಬಸಪ್ಪ ಮಾಳಿಗಿ, ಜೋಗಿಹಟ್ಟಿ ಬಾಲರಾಜ್, ಚಿಕ್ಕಮ್ಮನಹಟ್ಟಿ ಬಸವರಾಜ್ ಇತರರಿದ್ದರು.