ಹರಪನಹಳ್ಳಿ ನ.19- ತಾಲ್ಲೂಕಿನ ವಿವಿಧೆಡೆ ಒಟ್ಟು 8 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ಮತ್ತು ಸಂಸದ ಜಿ.ಎಂ. ಸಿದ್ಧೇಶ್ವರ ಇಂದು ಚಾಲನೆ ನೀಡಿದರು.
ವಡ್ಡಿನಹಳ್ಳಿ ಗ್ರಾಮದಿಂದ ಉಚ್ಚಂಗಿದುರ್ಗ, ಹಿರೇಮೇಗಳಗೇರಿಗೆ ಕೂಡುವ ರಸ್ತೆ ಮಾರ್ಗ ವಯಾ ಚಿಕ್ಕಮೇಗಳಗೇರಿ 4.34 ಕಿ.ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿಗೆ 5 ಕೋಟಿ ರೂ. ನಿಗದಿಯಾಗಿದೆ. ಹಿರೇಮೇಗಳಗೇರಿಯಿಂದ ಶ್ರೀಕಂಠಪುರ ಗ್ರಾಮಕ್ಕೆ ಸೇರುವ 3 ಕೋಟಿ ರೂ. ವೆಚ್ಚದ 2.80 ಕಿ.ಮೀ. ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ರಶ್ಮಿ ರಾಜಪ್ಪ, ಬಿಜೆಪಿ ಬಳ್ಳಾರಿ ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿ ಆರ್. ಲೋಕೇಶ್, ಬಿಜೆಪಿ ಮುಖಂಡರಾದ ಹಿರೇಮೇಗ ಳಗೇರಿ ಎಸ್. ದೇವೇಂದ್ರಪ್ಪ, ಹಾಲೇಶ, ಶಿವಾಜಿ. ಹಂಚಿನ ಮನಿ ದುರುಗೇಶ, ಎಂ. ಸಂತೋಷ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಲಿಂಗಪ್ಪ, ಸಿಬ್ಬಂದಿ ಅಶೋಕ ಇನ್ನಿತರರಿದ್ದರು.