ದಾವಣಗೆರೆ,ನ.13- ದಾವಣಗೆರೆ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ರಕ್ತ ದಾನ ಶಿಬಿರ ನಡೆಯಿತು. ಕ್ಲಬ್ಬಿನ ಅಧ್ಯಕ್ಷ ಕೆ.ಎಂ. ವಿಜಯಕುಮಾರ್ ಸ್ವತಃ ರಕ್ತದಾನ ಮಾಡುವುದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಜಿಲ್ಲಾ ಲಯನ್ಸ್ 317ಸಿ ಉಪ ರಾಜ್ಯಪಾಲರುಗಳಾದ ವಿಶ್ವನಾಥ ಶೆಟ್ಟಿ ಮತ್ತು ಕೆ.ಸಿ.ವೀರಭದ್ರ ಅವರುಗಳು ಶಿಬಿರದ ವೇದಿಕೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ ಶೆಟ್ಟಿ ಮತ್ತು ಕೆ.ಸಿ. ವೀರಭದ್ರ, ಒಂದು ಜೀವವನ್ನು ಉಳಿಸಬಲ್ಲ ರಕ್ತದಾನವು ಶ್ರೇಷ್ಠ ದಾನವಾಗಿದ್ದು, ಆರೋಗ್ಯವಂತರಾಗಿರುವ ಪ್ರತಿಯೊಬ್ಬರೂ ರಕ್ತದಾನ ಮಾಡಬಹುದಾಗಿದೆ ಎಂದರು.
ಜಿಲ್ಲಾ ಲಯನ್ಸ್ ಮಾಜಿ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಎ.ಆರ್. ಉಜ್ಜನಪ್ಪ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಎನ್. ವಿ. ಹರೀಶ್, ವಲಯಾಧ್ಯಕ್ಷ ವೈ.ಬಿ. ಸತೀಶ್, ಕ್ಲಬ್ ವಿಸ್ತರಣಾ ಸಮಿತಿ ಛೇರ್ಮನ್ ಬೆಳ್ಳೂಡಿ
ಶಿವಕುಮಾರ್, ಜಿಲ್ಲಾ ಲಯನ್ಸ್ ಕೋ-ಆರ್ಡಿನೇಟರ್ ಗಳಾದ ದಿನೇಶ್ ಕೆ.ಶೆಟ್ಟಿ, ಲಯನ್ಸ್ ಟ್ರಸ್ಟ್ ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಎಸ್. ಶಿವಮೂರ್ತಿ ಸುರಭಿ, ಲಯನ್ಸ್ ಉಪಾಧ್ಯಕ್ಷ ಎಸ್. ಓಂಕಾರಪ್ಪ, ಕಾರ್ಯದರ್ಶಿ ಕೋರಿ ಶಿವಕುಮಾರ್, ಖಜಾಂಚಿ ಸಂಪತ್ ಬಿ.ಹಳ್ಳಿಕೇರಿ,
ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್ ಮತ್ತಿತರರು ಉಪಸ್ಥಿತರಿದ್ದರು.