ಜಗಳೂರು, ನ.13- ಐಸಿಎಆರ್ ತರಳ ಬಾಳು ಕೃಷಿ ವಿಜ್ಞಾನ ಕೇಂದ್ರ ವತಿಯಿಂದ ಜಗ ಳೂರು ತಾಲ್ಲೂಕು ಮರಿಕುಂಟೆ ಗ್ರಾಮದಲ್ಲಿ ಹತ್ತಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಪ್ರಾತ್ಯ ಕ್ಷಿಕೆಯ ಕ್ಷೇತ್ರೋತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಮಣ್ಣು ವಿಜ್ಞಾನ ವಿಷಯ ತಜ್ಞ ಹೆಚ್.ಎಂ.ಸಣ್ಣಗೌಡರ ಮಾತ ನಾಡಿ, ರೈತರು ಸಮಗ್ರ ಬೆಳೆ ನಿರ್ವಹಣೆ ಕಡೆ ಗಮನ ವಹಿಸಬೇಕೆಂದು ಮನವರಿಕೆ ಮಾಡಿಕೊ ಟ್ಟರು. ಜೊತೆಗೆ ಸುರಕ್ಷಿತ ಕೀಟನಾಶಕ ಬಳಕೆ ಕುರಿತು ಪ್ರಾತ್ಯಕ್ಷಿಕೆ ತೋರಿಸಲಾಯಿತು.
ಪ್ರಾತ್ಯಕ್ಷಿಕೆ ಅಳವಡಿಸಿಕೊಂಡ ರೈತ ಬಸವರಾಜ ಮಾತನಾಡಿ, ಕಾಲಕಾಲಕ್ಕೆ ತಜ್ಞರ ಸಲಹೆ ಅಳವಡಿಸಿಕೊಂಡಿರುವುದರಿಂದ ರೋಗ ಮತ್ತು ಕೀಟದ ಹಾವಳಿ ಕಡಿಮೆಯಾಗಿ ಉತ್ತಮ ಇಳುವರಿ ಬಂದಿರುವುದಾಗಿ ಸಂತಸ ವ್ಯಕ್ತಪಡಿಸಿದರು.
ರೈತರಿಗೆ ಅಗತ್ಯ ಪರಿಕರಗಳನ್ನು ಈ ಸಂದರ್ಭದಲ್ಲಿ ಒದಗಿಸಲಾಯಿತು. ಕೇಂದ್ರದ ಬೇಸಾಯ ತಜ್ಞರಾದ ಬಿ.ಓ.ಮಲ್ಲಿಕಾರ್ಜುನ್, ಕೊಂಡುಕುರಿ ರೈತ ಉತ್ಪಾದಕ ಕಂಪನಿಯ ಕಾರ್ಯ ನಿರ್ವಹಣಾಧಿಕಾರಿ ರುದ್ರೇಶ್ ಮತ್ತು ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.