ಮಲೇಬೆನ್ನೂರು, ನ.12- ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂ ಘದ ಅಧ್ಯಕ್ಷರಾಗಿ ಶ್ರೀಮತಿ ನಾಗರತ್ನಮ್ಮ ಕೆ.ಜಿ. ಪರಮೇಶ್ವರಪ್ಪ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಿ.ಅಬ್ದುಲ್ ಹಾದಿ ಅವರ ರಾಜೀ ನಾಮೆಯಿಂದಾಗಿ ಅಧ್ಯಕ್ಷ ಸ್ಥಾನ ತೆರವಾ ಗಿತ್ತು. ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ ಒಬ್ಬರೇ ಸ್ಪರ್ಧಿಸಿದ್ದರಿಂದ ಅವರ ಆಯ್ಕೆ ಅವಿರೋ ಧವಾಗಿದೆ ಎಂದು ಚುನಾವಣಾಧಿಕಾರಿ ಯಾಗಿದ್ದ ರುದ್ರಪ್ಪ ಘೋಷಿಸಿದರು.
ಸಂಘದ ಸಿಇಓ ಸಿದ್ದಪ್ಪ ಹಾಜರಿ ದ್ದರು. ಸಂಘದ ಉಪಾಧ್ಯಕ್ಷ ಎ.ಕೆ. ನರಸಿಂಹಪ್ಪ, ನಿರ್ದೇಶಕರಾದ ಸಿರಿಗೆರೆ ರಾಜಣ್ಣ, ಜಿ. ಮಂಜುನಾಥ್ ಪಟೇಲ್, ಸಿ.ಅಬ್ದುಲ್ ಹಾದಿ, ಎಂ.ಬಿ. ಗುಲ್ಜಾರ್, ಕೆ.ಪಿ. ಗಂಗಾಧರ್, ಬಿ.ಸೈಫುಲ್ಲಾ, ಪಿ.ಆರ್. ಕುಮಾರ್, ಯೂನುಸ್, ಶ್ರೀಮತಿ ರೇವಮ್ಮ ಐರಣಿ ಪುಟ್ಟಪ್ಪ ಅವರುಗಳು ಅವಿರೋಧ ಆಯ್ಕೆಗೆ ಸಹಕರಿಸಿದರು.
ಚುನಾವಣೆ ನಂತರ ನೂತನ ಅಧ್ಯಕ್ಷರನ್ನು ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ, ಜಿ.ಪಂ. ಮಾಜಿ ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಿ.ಎಸ್. ಹನುಮಂತಪ್ಪ, ಜಿಗಳಿ ಆನಂದಪ್ಪ, ತಾ.ಪಂ. ಅಧ್ಯಕ್ಷ ಎಂ.ಬಿ.ರೋಷನ್, ಮುಖಂಡರಾದ ಕೆ.ಜಿ. ವೀರನಗೌಡ್ರು, ಓ.ಜಿ. ರುದ್ರ ಗೌಡ್ರು, ಕಣ್ಣಾಳ್ ಪರಸಪ್ಪ, ತಳಸದ ಬಸವರಾಜ್, ಬಿ. ವೀರಯ್ಯ, ಉಡೇದರ ನಿಂಗಪ್ಪ, ಕೆ.ಜಿ. ನಂಜುಂಡಪ್ಪ, ಗೋಪ ನಾಳ್ ಜಯ್ಯಣ್ಣ, ಕೆ.ಜಿ. ಲೋಕೇಶ್, ಎಂ.ಬಿ. ಫಜ್ಲು, ಬೆಣ್ಣೆಹಳ್ಳಿ ಬಸವರಾಜ್, ಕೆ.ಜಿ. ಮಂಜುನಾಥ್, ಜಿಗಳೇರ ಮಂಜಣ್ಣ, ಹುಳ್ಳಳ್ಳಿ ಸಿದ್ದೇಶ್, ಕೆ. ಬಸವಲಿಂಗಪ್ಪ, ಬೆಣ್ಣೆಹಳ್ಳಿ ಸಿದ್ದೇಶ್, ಚಿಟ್ಟಕ್ಕಿ ನಾಗರಾಜ್, ಪುರಸಭೆ ಸದಸ್ಯರಾದ ಬಿ.ಸುರೇಶ್, ಎ. ಆರೀಫ್ ಅಲಿ, ಭೋವಿ ಕುಮಾರ್, ಚಮನ್‌ಷಾ, ಅಕ್ಬರ್ ಅಲಿ, ಪಿ. ಬೀರಪ್ಪ, ಕೊಕ್ಕನೂರು ಸೋಮಶೇಖರ್, ಜಿಗಳಿಯ ಬಿ.ಎಂ. ದೇವೇಂದ್ರಪ್ಪ, ಜಿ.ಪಿ. ಹನುಮಗೌಡ ಸೇರಿದಂತೆ ಇನ್ನೂ ಅನೇಕರು ಅಭಿನಂದಿಸಿದರು.