ಹರಿಹರ, ಆ 9- ನಗರದ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ನದಿಯನ್ನು ನೋಡಲು ಸಾರ್ವಜನಿಕರ ದಂಡು ಹರಿದುಬರುತ್ತಿದೆ.
ಮಲೆನಾಡು ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಮಳೆಯು ಹೆಚ್ಚಾಗಿ ಬೀರುತ್ತಿರುವ ಪರಿಣಾಮವಾಗಿ ನಗರದ ತುಂಗಭದ್ರಾ ನದಿಗೆ ನೀರು ಹೆಚ್ಚಾಗಿ ಹರಿದುಬರುತ್ತಿದೆ. ಇದರಿಂದಾಗಿ ಸುಂದರವಾಗಿ ನದಿಯಲ್ಲಿ ಹರಿಯುವ ನೀರನ್ನು ನೋಡಲು ಜನಸಾಗರ ಹರಿದು ಬರುತ್ತಿದೆ.
ನಗರದ ಜನತೆ ಅಷ್ಟೇ ಅಲ್ಲದೇ ನಗರ ಸುತ್ತಮುತ್ತಲಿನ ಪ್ರದೇಶಗಳಾದ ದಾವಣ ಗೆರೆ, ರಾಣೇಬೆನ್ನೂರು, ಹರಪನಹಳ್ಳಿ, ಮಲೆಬೆನ್ನೂರು, ಸೇರಿದಂತೆ ಹಲವಾರು ನಗರದ ಜನತೆ ಸುಂದರವಾಗಿ ಹರಿಯುವ ತುಂಗಭದ್ರಾ ನದಿಯ ನೀರಿನ ಹರಿವನ್ನು ನೋಡಲು ಆಗಮಿಸುತ್ತಿದ್ದಾರೆ.
ನೋಡಲು ಆಗಮಿಸಿದ ಜನರು ಬಡವ ರ ಬಾದಾಮಿ ಶೇಂಗಾ, ಕಾರಾ – ಮಂಡಕ್ಕಿ, ಮೆಣಸಿನಕಾಯಿ, ಸೌತೆಕಾಯಿ ಬಜ್ಜಿ, ಚಿಪ್ಸ್, ಸೇರಿದಂತೆ ಅನೇಕ ಪದಾರ್ಥಗಳ ಸವಿಯುತ್ತ ನದಿಯನ್ನು ನೋಡಿದರೆ, ಇತ್ತ ಮಕ್ಕಳು ವಿವಿಧ ಬಗೆಯ ಪೀಪಿಗಳನ್ನು ಹಿಡಿದುಕೊಂಡು ಅವರು ಉಲ್ಲಾಸದಿಂದ ನದಿ ವೀಕ್ಷಣೆ ಮಾಡಿದರು.
ನಗರದ ಗಂಗಾನಗರ, ಮೆಟ್ಟಿಲು ಹೋಳೆ ಪಕ್ಕದಲ್ಲಿ, ತಗ್ಗಿನಕೇರಿ, ಕೈಲಾಸ ನಗರ ಸೇರಿದಂತೆ ಹಲವಾರು ಬಡಾವಣೆ ಯಲ್ಲಿ ನದಿಯ ಪಕ್ಕದಲ್ಲಿ ವಾಸಿಸುವ ಜನರನ್ನು ಇದುವರೆಗೂ ಅವರನ್ನು ತಾಲ್ಲೂಕು ಆಡಳಿತವು ಬೇರೆ ಸ್ಥಳಕ್ಕೆ ಸ್ಥಳಾಂತರ ಮಾಡುವುದಕ್ಕೆ ಮುಂದಾಗಿಲ್ಲ.
ನದಿಯ ಎರಡು ಭಾಗದಲ್ಲಿ ಯಾವುದೇ ಅವಘಡಗಳು ನಡೆಯದಂತೆ ತಡೆಯಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಲಾಗಿತ್ತು.