ಮಲೆನಾಡಿನಲ್ಲಿ ಮುಂದುವರಿದ ಮುಂಗಾರು ಅಪಾಯ ಮಟ್ಟದಲ್ಲಿ ತುಂಗ, ಭದ್ರಾ ನದಿಗಳು

ಶಿವಮೊಗ್ಗ, ಆ.7- ಮಲೆನಾಡಿನಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಭದ್ರಾ, ತುಂಗಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಗಾಜನೂರಿನ ತುಂಗಾ ಜಲಾಶಯಕ್ಕೆ ಶುಕ್ರವಾರ ಸಂಜೆ ಮಾಹಿತಿ ಪ್ರಕಾರ 70 ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದು, ಅಷ್ಟೂ ನೀರನ್ನು ನದಿಗೆ ಬೀಡಲಾಗಿದೆ. ಇದರಿಂದಾಗಿ ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಮತ್ತೊಷ್ಟು ಹೆಚ್ಚಾಗುತ್ತಿದ್ದು, ನದಿ ಪಾತ್ರದ ಜನರು ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಶಿವಮೊಗ್ಗ, ಹೊನ್ನಾಳಿ, ಹರಿಹರ, ಹರಪನಹಳ್ಳಿ, ಹೂವಿನಹಡಗಲಿ ತಾಲ್ಲೂಕಿನ ಭದ್ರಾ ಜಲಾಶಯಕ್ಕೆ ಶುಕ್ರವಾರ ಬೆಳಿಗ್ಗೆ 57,477 ಕ್ಯೂಸೆಕ್ಸ್ ಇದ್ದ ನೀರಿನ ಒಳಹರಿವು ಮಧ್ಯಾಹ್ನ 65 ಸಾವಿರ ಕ್ಯೂಸೆಕ್ಸ್‌ಗೆ ಏರಿಕೆಯಾಗಿ ಸಂಜೆ 58 ಸಾವಿರ ಕ್ಯೂಸೆಕ್ಸ್‌ಗೆ ಇಳಿಕೆ ಕಂಡಿತ್ತು. ಜಲಾಶಯದ ನೀರಿನ ಮಟ್ಟ 167 ಆಗಿತ್ತು. ಶನಿವಾರ ಬೆಳಿಗ್ಗೆ ಹೊತ್ತಿಗೆ 169 ಅಡಿ ತಲುಪಬಹುದೆಂದು ಅಂದಾಜಿಸಲಾಗಿದೆ.

ಆಗಸ್ಟ್ 4 ರಿಂದ ಭದ್ರಾ ಜಲಾಶಯಕ್ಕೆ ಒಳಹರಿವು ಆರಂಭವಾಗಿದ್ದು, ಕೇವಲ 4 ದಿನಗಳಲ್ಲಿ 13 ಅಡಿ ನೀರು ಹರಿದು ಬಂದಿದೆ. ಜಲಾಶಯ ಭರ್ತಿಗೆ 19 ಅಡಿ ಬಾಕಿ ಇದ್ದು, ಇದೇ ರೀತಿ ಮಳೆ ಮುಂದುವರಿದರೆ, ಆಗಸ್ಟ್ 15 ರೊಳಗೆ ಡ್ಯಾಂ ಭರ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 154 ಅಡಿ 3 ಇಂಚು ನೀರಿತ್ತು. ಜಲಾಶಯದ ಗರಿಷ್ಟ ಮಟ್ಟ 186 ಅಡಿಗಳಾಗಿರುತ್ತದೆ.

ರಾಜ್ಯಕ್ಕೆ ಪ್ರಮುಖವಾಗಿ ವಿದ್ಯುತ್ ಪೂರೈಸುವ ಲಿಂಗನಮಕ್ಕಿ ಜಲಾಶಯಕ್ಕೆ ಒಳಹರಿವು ಹೆಚ್ಚಿದ್ದು, ಶುಕ್ರವಾರ ಸಂಜೆ 90 ಸಾವಿರ ಕ್ಯೂಸೆಕ್ಸ್ ಒಳಹರಿವು ಇತ್ತು. 

ಕಬಿನಿ, ಬಸವಸಾಗರ ಜಲಾಶಯಗಳು ಈಗಾಗಲೇ ಭರ್ತಿಯಾಗಿದ್ದು, ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಮೈಸೂರಿನ ಕೆಆರ್‌ಎಸ್ ಭರ್ತಿಗೆ 10 ಅಡಿ ಮಾತ್ರ ಬಾಕಿ ಇದ್ದು, ಸಂಜೆ 60 ಸಾವಿರ ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು.

ಮೈದುಂಬಿದ ಜೋಗ : ಭಾರೀ ಮಳೆಯಿಂದಾಗಿ ವಿಶ್ವ ವಿಖ್ಯಾಖ ಜೋಗ ಜಲಪಾತವು ಮೈದುಂಬಿ ಧುಮುಕ್ಕಿತ್ತಿರುವ ರುದ್ರ ರಮಣೀಯ ದೃಶ್ಯ ಆಕರ್ಷಣಿಯವಾಗಿದೆ.

error: Content is protected !!