ಬಾಪೂಜಿ ಆಸ್ಪತ್ರೆ ಚರ್ಮರೋಗ  ವಿಭಾಗದಲ್ಲಿ ಲೇಸರ್ ಚಿಕಿತ್ಸೆ

ದಾವಣಗೆರೆ,  ಆ. 7-  ನಗರದ ಬಾಪೂಜಿ ವಿದ್ಯಾಸಂಸ್ಥೆಯ ಜೆ.ಜೆ.ಎಂ. ವೈದ್ಯಕೀಯ ಮಹಾವಿದ್ಯಾಲಯ, ಬಾಪೂಜಿ ಆಸ್ಪತ್ರೆಯ ಚರ್ಮರೋಗ ವಿಭಾಗದಲ್ಲಿ ನಾಲ್ಕು ಲೇಸರ್ ಯಂತ್ರಗಳನ್ನು ಅಳವಡಿಸಲಾಗುತ್ತಿದ್ದು, ನಗರ ಹಾಗೂ ಸುತ್ತಮುತ್ತಲಿನ ಜನರು ಸದುಪಯೋಗ ಪಡಿಸಿಕೊಳ್ಳುವಂತ ಜಿ.ಜೆಎಂ.ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ಎಸ್. ಬಿ. ಮುರುಗೇಶ್ ತಿಳಿಸಿದ್ದಾರೆ.

25 ವರ್ಷದಿಂದಲೂ ಆಸ್ಪತ್ರೆಯಲ್ಲಿ ಚರ್ಮ ರೋಗಕ್ಕೆ ಚಿಕಿತ್ಸೆ ನೀಡಲಾಗು ತ್ತಿದೆ. ಆದರೆ, ಪ್ರಸ್ತುತ ಹೊಸ ಲೇಸರ್ ಯಂತ್ರಗಳಿಂದ ಕಡಿಮೆ ವೆಚ್ಚದಲ್ಲಿ ಅತ್ಯಾಧುನಿಕ ಚಿಕಿತ್ಸೆ ನೀಡಬಹುದಾಗಿದೆ ಎಂದವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಮೊಡವೆ ಮತ್ತಿತರೆ ಚರ್ಮರೋಗಳಿಂದ ಜನರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ನಗರದಲ್ಲಿ ಹೆಚ್ಚಾಗಿರುವ ಬ್ಯೂಟಿ ಪಾರ್ಲರ್‌ಗಳಲ್ಲಿ ಅನುಭವ ಇಲ್ಲದವರು ಮೊಡವೆಗಳಿಗೆ ಸ್ಟಿರಾಯ್ಡ್ ಬಳಸುತ್ತಾರೆ. ಇದು ಅಪಾಯಕಾರಿಯಾಗಿದ್ದು, ಜನರು ಜಾಗೃತರಾಗಬೇಕಿದೆ ಎಂದು ಹೇಳಿದರು.

ಚರ್ಮ ರೋಗ ವೈದ್ಯ ಡಾ.ಸೂಗಾರೆಡ್ಡಿ ಮಾತನಾಡಿ, ಡಯೋಡ್ ಲೈಸರ್, ಫ್ರಾಕ್ಷನಲ್ ಲೇಸರ್, ಕ್ಯೂಸ್ವಿಚ್ಡ್ ಲೇಸರ್ ಹಾಗೂ ಎಕ್ಸೈಮರ್ ಲೈಸರ್‌ ಎಂಬ ನಾಲ್ಕು ಯಂತ್ರಗಳಿಂದ ಸೋರಿಯಾಸಿಸ್, ತೊನ್ನು, ನಾರೊಳ್ಳಿ, ಮೊಡವೆ, ಬೇಡವಾದ ಕೂದಲು, ಬಂಗು ಇತ್ಯಾದಿ ಕಾಯೆಲೆಗಳಿಗೆ ಚಿಕಿತ್ಸೆ ಪಡೆಯಬಹುದು, ಈ ಚಿಕಿತ್ಸೆಗೆ ಅನಸ್ತೇಷಿಯಾ ನೀಡುವ ಅಗತ್ಯವೂ ಇರುವುದಿಲ್ಲ ಎಂದರು.

ರಕ್ತ ಭಂಡಾರ ಅಧಿಕಾರಿ ಡಾ.ನಿಕೇತನ್, ಡಾ.ನಾಡಿಗ ರಾಜಶೇಖರ್, ಡಾ.ರಶ್ಮಿ ಉಪಸ್ಥಿತರಿದ್ದರು.

error: Content is protected !!