ಶಾಸಕ ಭೀಮಾನಾಯ್ಕ ವಿರುದ್ಧ ಬಿಜೆಪಿ ಪ್ರತಿಭಟನೆ

ಹರಪನಹಳ್ಳಿ, ನ. 9- ಶಾಸಕ ಭೀಮಾನಾಯ್ಕ ಅವರು ಬಿಜೆಪಿ ಕಾರ್ಯಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿರುವ ಇಲ್ಲಿನ ಬಿಜೆಪಿಯು, ಶಾಸಕರ ವರ್ತನೆಯನ್ನು ಖಂಡಿಸಿ ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಇಂದಿಲ್ಲಿ ಪ್ರತಿಭಟನೆ  ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿತು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್ ಮಾತನಾಡಿ, ನವೆಂಬರ್ 8 ರಂದು ನಡೆದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯ ವೇಳೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಭೀಮಾನಾಯ್ಕ್ ತಾವು ಶಾಸಕರೆನ್ನು ವುದನ್ನು ಮರೆತು ವರ್ತಿಸಿದ್ದಾರೆ. ತಮ್ಮೊಂದಿಗೆ ಕೆಲ ಬಾಡಿಗೆ ಗೂಂಡಾಗಳನ್ನು ಕರೆತಂದು ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇಂತಹ ಅನಾಗರಿಕ ವರ್ತನೆಯ ಶಾಸಕರನ್ನು ವಜಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಮುಖಂಡ ಎಂ.ಪಿ. ನಾಯ್ಕ ಮಾತನಾಡಿ, ಒಂದು ಕ್ಷೇತ್ರದ ಜವಾಬ್ದಾರಿಯುತ ಶಾಸಕರಾಗಿ ಅನಾಗರಿಕರಂತೆ ಗೂಂಡಾ ವರ್ತನೆ ತೋರಿರುವುದು ಅವರಿಗೆ ಶೋಭೆ ತರುವಂತಹದ್ದಲ್ಲ. ಅವಾಚ್ಯ ಶಬ್ದಗಳ ಬಳಕೆ ಇವರ ಘನತೆಯನ್ನು ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉಪಾಧ್ಯಕ್ಷರುಗಳಾದ ನಿಟ್ಟೂರು ಸಣ್ಣ ಹಾಲಪ್ಪ, ಬಂಗಿ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ  ಉದಯಕುಮಾರ್, ಬಿಜೆಪಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಟಿ. ಪದ್ಮಾವತಿ, ಕಾರ್ಯದರ್ಶಿ ಲತಾ ನಾಗರಾಜ, ಪುರಸಭಾ ಅಧ್ಯಕ್ಷ ಮಂಜುನಾಥ ಇಜಂತಕರ್,  ಉಪಾಧ್ಯಕ್ಷೆ ಎನ್. ಭೀಮವ್ವ, ಸದಸ್ಯ ಕಿರಣ ಶಾನ್ ಬಾಗ್, ಕೆ.ಬಸವರಾಜ, ಮುಖಂಡರಾದ ಎಂ.ಪಿ.ನಾಯ್ಕ, ಬಾಗಳಿ ಕೊಟ್ರೇಶಪ್ಪ, ಕೆ.ಲಿಂಗಾನಂದ, ದಾದಾಪುರ ಶಿವಾನಂದ, ನೀಲ ಗುಂದ ತಿಮ್ಮೇಶ, ನಂದಿಬೇವೂರು ರಾಜಪ್ಪ, ರಾಘವೇಂದ್ರಶೆಟ್ಟಿ, ಎಸ್ ಪಿ. ಲಿಂಬ್ಯಾನಾಯ್ಕ, ಆಲೂರು ಶ್ರೀನಿವಾಸ, ತಿಮ್ಮಣ್ಣ, ಆರ್.ಕರೇಗೌಡ, ರೇಖಮ್ಮ, ಎಂ.ಸಂತೋಷ ಹಾಗೂ ಇತರರು ಪಾಲ್ಗೊಂಡಿದ್ದರು.

error: Content is protected !!