ಬಗರ್ ಹುಕ್ಕುಂ ಸಾಗುವಳಿದಾರರಿಗೆ ಹಕ್ಕು ಪತ್ರಕ್ಕೆ ಆಗ್ರಹ

ಬೆಂಗಳೂರು ಸಮೀಪ ಹಸಿರು ವಲಯಕ್ಕಾಗಿ ಬಡವರ ಸಾವಿರಾರು ಎಕರೆ ಜಮೀನು ಹರಾಜಿಗಾಗಿ ಸರ್ಕಾರದ ಪ್ರಕಟಣೆ. ಈ ಹರಾಜು ಆದೇಶ ಹಿಂಪಡೆಯದಿದ್ದರೆ ನ. 17ರಂದು ಮುಖ್ಯಮಂತ್ರಿಗಳ ಮನೆ ಮುಂದೆ ಪ್ರತಿಭಟನೆ.

– ಮಾರಸಂದ್ರ ಮುನಿಯಪ್ಪ, ರಾಜ್ಯ ಸಂಯೋಜಕ, ಬಹುಜನ ಸಮಾಜ ಪಾರ್ಟಿ

ಹರಿಹರ, ನ.8- ಬಗರ್ ಹುಕ್ಕುಂ ಸಾಗುವ ಳಿದಾರರಿಗೆ ರಾಜ್ಯ ಸರ್ಕಾರ ಕೂಡಲೇ ಹಕ್ಕು ಪತ್ರ ವಿತರಣೆ ಮಾಡಬೇಕು ಎಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದ್ದಾರೆ.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗ ಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ರಾಜ್ಯ ದೆಲ್ಲೆಡೆ ಶೋಷಿತರು, ಹಿಂದುಳಿದ, ಅಲ್ಪಸಂ ಖ್ಯಾತರು ಅಲ್ಪ ಪ್ರಮಾಣದ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಲು ಮೀನಾ-ಮೇಷ ಎಣಿಸಲಾಗುತ್ತಿದೆ. ಈ ಹಿಂದೆ ಕಾಗೋಡು ತಿಮ್ಮಪ್ಪ ಸಚಿವರಿದ್ದಾಗ 1.50 ಲಕ್ಷ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿದ್ದರು. ಇನ್ನೂ 8.50 ಲಕ್ಷ ಜನ ಫಲಾನುಭವಿಗಳಿದ್ದಾರೆ. ಬಗರ್ ಹುಕ್ಕುಂ ಸಮಿತಿಗಳನ್ನು ರಚಿಸಿ ಹಕ್ಕುಪತ್ರ ನೀಡುವ ಕೆಲಸವನ್ನು ಆರಂಭಿಸಬೇಕೆಂದರು.

ಬಡವರು ಅಕ್ರಮವಾಗಿ ಸರ್ಕಾರಿ ಜಾಗ ಗಳಲ್ಲಿ 10 ಲಕ್ಷ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಪೈಕಿ 2.50 ಲಕ್ಷ ಜನರಿಗೆ ಹಕ್ಕುಪತ್ರ ನೀಡಿದ್ದು, ಇನ್ನೂ 7.50 ಲಕ್ಷ ಜನರಿಗೆ ಹಕ್ಕುಪತ್ರ ನೀಡಬೇಕಿದೆ. ರಾಜ್ಯದ 33 ಸಾವಿರ ಗ್ರಾಮಗಳ ಪೈಕಿ 12500 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಗಳಿಲ್ಲ. ಈ ಕುರಿತು ಸರ್ಕಾರ ಗಮನ ಹರಿಸಬೇಕಿದೆ ಎಂದರು.

ಬೆಂಗಳೂರು ಸಮೀಪ ಹಸಿರು ವಲಯ ಕ್ಕಾಗಿ ಬಡವರ ಸಾವಿರಾರು ಎಕರೆ ಜಮೀನು ಹರಾಜಿಗಾಗಿ ಸರ್ಕಾರ ಪ್ರಕಟಣೆ ಹೊರಡಿಸಿದೆ. ಈ ಜಮೀನನ್ನು ನಂಬಿ ಬದುಕುತ್ತಿರುವವರಿಗೆ ಇದು ಆಘಾತಕಾರಿ, ಅವರು ಬೀದಿ ಪಾಲಾಗುತ್ತಾರೆ. ಹಸಿರು ವಲಯದಿಂದ ಶ್ರೀಮಂತರಿಗಷ್ಟೇ ಲಾಭ. ಜಮೀನು ವಶ ಪ್ರಕಟಣೆ ಹಿಂಪಡೆಯಬೇಕೆಂದರು. ಈ ಕುರಿತು ಸಿಎಂ ಹಾಗೂ ಕಂದಾಯ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಜಮೀನು ಹರಾಜು ಆದೇಶ ಹಿಂಪಡೆಯದಿದ್ದರೆ ಇದೇ ದಿನಾಂಕ 17ರಂದು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

ರಾಜ್ಯದಲ್ಲಿ ಎಸ್ಸಿ ವರ್ಗದವರಿಗೆ ಶೇ.15 ಮೀಸಲಾತಿ ಇದೆ. ಇದನ್ನು ಶೇ.17ಕ್ಕೇರಿಸಲು ನಾಗಮೋಹನ್‍ದಾಸ್ ವರದಿ ಶಿಫಾರಸ್ಸು ಮಾಡಿದೆ. ಈ ಮೀಸಲಾತಿಯನ್ನು ಶೇ.20ಕ್ಕೇ ರಿಸಬೇಕೆಂಬುದು ಬಿಎಸ್‍ಪಿ ಒತ್ತಾಯವಾಗಿದೆ. ಅದೇ ರೀತಿ ಎಸ್ಟಿ ಮೀಸಲಾತಿ ಶೇ.3 ಇದೆ, ಶೇ.7ಕ್ಕೆ ಶಿಫಾರಸ್ಸು ಆಗಿದೆ, ಇದನ್ನು ಶೇ.10ಕ್ಕೆ ಏರಿಸಬೇಕೆಂದು ಆಗ್ರಹಿಸಿದರು.

ನ್ಯಾ. ಸಾಚಾರ್ ವರದಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ಧಗೊಂಡಿತ್ತು. ಈ ವರದಿ ಮುಸ್ಲಿಂ ಸಮಾಜದವರ ಸಂಕಷ್ಟಮಯ ಬದುಕನ್ನು ಸಾಕ್ಷಾತ್ ಬಿಂಬಿಸಿದೆ. ಇದನ್ನು ಜಾರಿ ಮಾಡುವ ಜವಾಬ್ದಾರಿ ಇದ್ದ ಕಾಂಗ್ರೆಸ್ ಪಕ್ಷವೇ ಮೈಮರೆತಿದೆ ಎಂದರು.

ಬಿಎಸ್‍ಪಿ ಮುಖಂಡರಾದ ಡಿ.ಹನು ಮಂತಪ್ಪ, ಎಚ್.ಮಲ್ಲೇಶ್, ಕೋಟೆಮಲ್ಲೂರು ಪರಶುರಾಮ, ಮರುಳಸಿದ್ದಪ್ಪ ನ್ಯಾಮತಿ, ಎಸ್.ಕೇಶವ, ಆನಂದ ಕುಮಾರ್, ರವಿಕುಮಾರ್, ರಾಮಚಂದ್ರಪ್ಪ ನ್ಯಾಮತಿ, ಗಂಗಪ್ಪ, ಕೃಷ್ಣಪ್ಪ, ಕೆ.ಬಿ.ಮಂಜಪ್ಪ ಕಾರಿಗನೂರು ಇತರರಿದ್ದರು.

 

error: Content is protected !!