ಹರಪನಹಳ್ಳಿ, ಆ. 3 – ಕೊರಚ ಸಮುದಾಯದ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡಿದರೆನ್ನಲಾದ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಅವರಿಗೆ ಶೀಘ್ರದಲ್ಲೇ ಮನವಿ ಸಲ್ಲಿಸುವುದಾಗಿ ರಾಜ್ಯ ಕೊರಚ ಸಮಾಜದ ಅಧ್ಯಕ್ಷ ಕೆ.ಎನ್.ಓಂಕಾರಪ್ಪ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಡಗಲಿ ತಾಲ್ಲೂಕಿನ ಕುರುವತ್ತಿ ಕ್ಯಾಂಪಿ ನಲ್ಲಿ ಜು.30 ರಂದು ಕುರಿ ಕಳ್ಳತನ ಮಾಡಿದ್ದಾ ರೆಂಬ ಆರೋಪದಡಿ ಸ್ಥಳಕ್ಕೆ ಆಗಮಿಸಿದ್ದ ಶಾಸ ಕರು, ಕೊರಚ ಸಮಾಜಕ್ಕೆ ನಿಂದನೆ ಮಾತುಗಳನ್ನು ಆಡಿದ್ದಾರೆ. ಈ ಕುರಿತು ಹಡಗಲಿ ಪೊಲೀಸ್ ಠಾಣೆಯಲ್ಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ದೂರು ದಾಖಲು ಮಾಡಲಾಗಿದೆ ಎಂದವರು ಹೇಳಿದರು.
ಕೊರಚ, ಕೊರಮ ಸಮಾಜದ ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷ ಅಗ್ರಹಾರದ ಕೆ.ಅಶೋಕ ಮಾತ ನಾಡಿ ಶಾಸಕರ ವರ್ತನೆಯನ್ನು ಖಂಡಿಸಿದರು.
ಕೊರಚ, ಕೊರಮ ಸಮಾಜದ ಹಡಗಲಿ ತಾಲ್ಲೂಕು ಅಧ್ಯಕ್ಷ ಶಿವಪುರ ಸುರೇಶ್, ತಾ.ಪಂ ಮಾಜಿ ಸದಸ್ಯ ಮಲ್ಲೇಶ, ಕೃಷ್ಣ, ಪ್ರಫುಲ್, ಗಂಗಪ್ಪ, ಪುಟ್ಟಣ್ಣ, ಪುರುಷೋತ್ತಮ ನಾಗಪ್ಪ ಇತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.