ದಾವಣಗೆರೆ, ಆ.2- ನಗರದ 15ನೇ ವಾರ್ಡಿನ ಪಾಲಿಕೆ ಸದಸ್ಯರಾದ ಆಶಾ ಉಮೇಶ್ ಅವರು ತಮ್ಮ ಪತಿಯ ಹುಟ್ಟು ಹಬ್ಬದ ಪ್ರಯುಕ್ತ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡುವುದರೊಂದಿಗೆ ಪತಿ ಉಮೇಶ್ ಅವರ 49ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸುವುದರೊಂದಿಗೆ, ಆಶಾ ಕಾರ್ಯಕರ್ತರಿಗೆ ಹಾಗೂ ಪಾಲಿಕೆ ನೌಕರರಿಗೆ ಸನ್ಮಾನ ಮಾಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಆಶಾ ವಹಿಸಿ ದ್ದರು. ಮುಖ್ಯ ಅತಿಥಿಗಳಾಗಿ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ವಕೀಲ ಪ್ರಕಾಶ್ ಪಾಟೀಲ್ ಹಾಗೂ ಗಡಿ ಗುಡಾಳ್ ಮಂಜಪ್ಪ ವೇದಿಕೆಯಲ್ಲಿದ್ದರು.
ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಮಾತನಾಡಿ, ಎಲ್ಲಾ ನಾಗರಿಕರು ಮಾಸ್ಕ್ ಧರಿಸುವುದು ಕಡ್ಡಾಯ. ಕೊರೊನಾ ವಿರುದ್ಧ ಹೋರಾಡಲು ಜಾಗ್ರತರಾಗಿ ಅಂತರ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು. ವಿಶಿಷ್ಟ ರೀತಿಯಲ್ಲಿ ವಾರಿಯರ್ಸ್‌ಗಳಿಗೆ ಸನ್ಮಾನ ಮಾಡುವುದರೊಂದಿಗೆ ಉಮೇಶ್ ಅವರ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಕ್ಕೆ ಶುಭವಾಗಲಿ ಎಂದು ಆರೈಸಿದರು. ಉಮೇಶ್ ಸ್ವಾಗತಿಸಿದರು. ಸಮಾಜ ಸೇವಕ ಕೆ.ಎಂ.ವೀರಯ್ಯ ಸ್ವಾಮಿ ವಂದಿಸಿದರು. ಬಾಲೆಹೊಲದ ಬಸಣ್ಣ, ಹೊನ್ನಪ್ಪ, ಹಾಲಪ್ಪ, ರವಿ, ವಿನಾಯಕ ವೆಂಕಟೇಶಪ್ಪ ಇತರರಿದ್ದರು.