ಹರಪನಹಳ್ಳಿ, ನ.5- ಹರಪನಹಳ್ಳಿ ಸದಾ ಕಾಂಗ್ರೆಸ್‍ನ ಭದ್ರ ಕೋಟೆ. ಪಕ್ಷದಲ್ಲಿನ ಆಂತರಿಕ ಭಿನ್ನಾಭಿಪ್ರಾಯ, ಗುಂಪುಗಾರಿಕೆಯಿಂದ ನಾವಿಲ್ಲಿ ಸೋಲು ಕಂಡಿದ್ದೇವೆಯೇ ಹೊರತು ಮತದಾರರಿಂದಲ್ಲ ಎಂದು ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ನೂತನವಾಗಿ ಆಯ್ಕೆಯಾಗಿರುವ ಟಿಎಪಿಸಿಎಂಸಿ ನಿರ್ದೇಶಕರಾಗಿ `ಬಿ’ ತರಗತಿಯಿಂದ ಆಯ್ಕೆಯಾಗಿರುವ ಗಿಡ್ಡಳ್ಳಿ ನಾಗರಾಜ್, ಎಲ್.ತಿಮ್ಮನಾಯ್ಕ, ಕುಲುಮಿ ಅಬ್ದುಲ್, ಪಿ.ಪ್ರೇಮ್‍ಕುಮಾರ್, ತಳವಾರ ಮಂಜಪ್ಪ, ಎಲ್.ಬಿ.ಹಾಲೇಶ್ ನಾಯ್ಕ, ಡಿ.ಜಿ.ಪ್ರಕಾಶ್ ಗೌಡ, ರೇವಣಸಿದ್ದಪ್ಪ, ನೇತ್ರಾವತಿ ಪರಶುರಾಮ್ ಅವರಿಗೆ ಸನ್ಮಾನಿಸಿ, ಗೌರವಿಸಿದ ಬಳಿಕ ಅವರು ಮಾತನಾಡಿ, `ಎ’ ತರಗತಿ ಸದಸ್ಯ ಪ್ರತಿನಿಧಿಗಳಿಂದ ಎಂ.ವಿ. ಕೃಷ್ಣಕಾಂತ, ತಳವಾರ ಮಂಜಪ್ಪ, ಬಿ.ಕೆ ಪ್ರಕಾಶ., ರೇವಣ್ಣಸಿದ್ದಪ್ಪ, ಕೆ.ಪಿ. ವಿರೂಪಾಕ್ಷಪ್ಪ, ಯು. ಹನುಮಂತಪ್ಪ ಹಾಗೂ ಹಾಲೇಶ್‍ನಾಯ್ಕ್ ಆಯ್ಕೆಯಾಗಿದ್ದಾರೆ. ಈ ಅಭ್ಯರ್ಥಿಗಳ ಗೆಲುವಿಗೆ ರೈತರು ಮತ್ತು ಷೇರುದಾರರು ಸಾಕ್ಷಿಯಾಗಿದ್ದಾರೆ ಎಂದರು.
ಟಿಎಪಿಸಿಎಂಸಿ ಚುನಾವಣೆಯ ಫಲಿತಾಂಶ ಮುಂದಿನ ಚುನಾವಣೆಗಳ ಫಲಿತಾಂಶಕ್ಕೆ ದಿಕ್ಸೂಚಿಯಾಗಿದೆ. ಈ ಚುನಾವಣೆ ಯಲ್ಲಿ ಪಕ್ಷದ 14 ಆಭ್ಯರ್ಥಿಗಳು ಗೆಲುವು ಸಾಧಿಸಿದ್ದು, ಹಿಂದೆ ನಮ್ಮ ಅಧಿಕಾರದ ಅವಧಿಯನ್ನು ಸೊಸೈಟಿಯಲ್ಲಿ ಸದೃಢಗೊಳಿಸುವ ನಿಟ್ಟಿನಲ್ಲಿ ವಿವಿಧ ಜನಪರ ಕಾರ್ಯಕ್ರಮ ಗಳನ್ನು ನೀಡಿದ್ದೆವು ಆಗ ಪಡಿತರ, ಬಟ್ಟೆಗಳನ್ನು ವಿತರಿಸಿದ್ದೆವು ಎಂದು ನೂತನ ನಿರ್ದೇಶಕರುಗಳಿಗೆ ಸಲಹೆ ನೀಡಿದರು.
ಪುರಸಭಾ ಚುನಾವಣಾ ಉಸ್ತುವಾರಿ ಸಿರಾಜ್‍ಶೇಖ್ ಮಾತನಾಡಿ, ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಗಾದಿಗೆ 7 ರಂದು ದಿನಾಂಕ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧ್ಯಕ್ಷರ ಸೂಚನೆಯ ಮೇರೆಗೆ ಪಕ್ಷದಿಂದ ಬಿ ಫಾರಂ ಪಡೆದು ಜಯ ಗಳಿಸಿದ 14 ಜನ ಸದಸ್ಯರ ಸಭೆ ಕರೆದಿದ್ದು, ಅವರ ಹಾಜರಾತಿಯನ್ನು ನೋಡಿಕೊಂಡು ವಿಪ್ ಜಾರಿ ಮಾಡಿ ಅನ್ಯ ಮಾರ್ಗ ಅನುಸರಿಸುವವರ ವಿರುದ್ಧ ಪಕ್ಷ ಶಿಸ್ತು ಕ್ರಮ ಕೈಗೊಳ್ಳಲಿದೆ ಎಂದರು.
ಬಳ್ಳಾರಿ ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬನ್ನಿಕಲ್ ಶಿವಯೋಗಿ, ಬಳ್ಳಾರಿ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಸದಸ್ಯ ಶಶಿಧರ್ ಪೂಜಾರ್, ಹರಪನಹಳ್ಳಿ ಬ್ಲಾಕ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್.ಬಿ.ಪರಶುರಾಮಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಂ.ರಾಜಶೇಖರ್, ಚಿಗಟೇರಿ ಬ್ಲಾಕ್ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಮುತ್ತಿಗಿ ಸಾಬಳ್ಳಿ ಜಂಬಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಎಂ.ಟಿ.ಬಸವನಗೌಡ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಎಲ್.ಪ್ರೇಮ್ಯಾನಾಯ್ಕ, ವಕೀಲ ಮತ್ತಿಹಳ್ಳಿ ಅಜ್ಜಣ್ಣ, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಸಂಚಾಲಕ ಬಿ.ನಜೀರ್ ಅಹ್ಮದ್, ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಟಿ.ಭರತ್, ಪುರಸಭೆ ಸದಸ್ಯರಾದ ಜಾಕೀರ್ ಹುಸೇನ್, ಪುರಸಭೆ ಮಾಜಿ ಸದಸ್ಯ ಅರುಣ್ ಪೂಜಾರ್, ತೊಗರಿಕಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ.ನೇಮ್ಯಾನಾಯ್ಕ, ಮುಖಂಡರಾದ ಆಲದಳ್ಳಿ ಷಣ್ಮುಖಪ್ಪ, ಯರಬಳ್ಳಿ ಉಮಾಪತಿ, ಪಿ.ವೇದನಾಯ್ಕ, ಚಿರಸ್ತಹಳ್ಳಿ ಪಿ.ಮರಿಯಪ್ಪ, ಹುಲಿಕಟ್ಟಿ ಬಾಷ, ತೌಡೂರು ಕೆಂಚಪ್ಪ, ಅಲಮರಸೀಕೇರಿ ಪರಶುರಾಮ, ಪಿ.ಪರಶುರಾಮ, ಬಾಣದ ಗಂಗಪ್ಪ, ಎಂ.ಕೆ.ರಾಯಲ್ ಸಿದ್ದಿಕ್, ರಿಯಾಜ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.