ಕುಂಬಳೂರಿನಲ್ಲಿ 2, ಹಾಲಿವಾಣ 2, ಕೆ.ಎನ್. ಹಳ್ಳಿ 1 ಪ್ರಕರಣ

ಮಲೇಬೆನ್ನೂರು, ಜು. 31 – ಕಳೆದೆರಡು ದಿನಗಳಿಂದ ಮಲೇಬೆನ್ನೂರು ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಬಂದಿಲ್ಲದಿರುವುದು ಸಮಾಧಾನದ ವಿಷಯವಾಗಿದ್ದರೆ. ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ 4 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಹಾಲಿವಾಣ ಗ್ರಾಮದಲ್ಲಿ 50 ವರ್ಷದ ಮಹಿಳೆಗೆ ಮತ್ತು ಕೆ.ಎನ್ ಹಳ್ಳಿಯಲ್ಲಿ 30 ವರ್ಷದ ಯುವಕನಿಗೆ ಹಾಗೂ ಕುಂಬಳೂರಿನಲ್ಲಿ 67 ವರ್ಷದ ವೃದ್ದ, 56 ವರ್ಷದ ಮಹಿಳೆಗೆ (ಗಂಡ-ಹೆಂಡತಿ) ಸೋಂಕು ತಗುಲಿದ್ದು ಸಿ.ಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸೋಂಕಿತ ಕುಟುಂಬದವರನ್ನು ಕ್ವಾರಂಟೈನ್ ಮಾಡಿ, ಮನೆ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ.

 51 ಪ್ರಕರಣ : ಇದುವರೆಗೆ ಮಲೇಬೆನ್ನೂರು ಪಟ್ಟಣದಲ್ಲಿ 33 ಮತ್ತು ಹೋಬಳಿ ವ್ಯಾಪ್ತಿಯಲ್ಲಿ 18 ಸೇರಿ ಒಟ್ಟು 51 ಪ್ರಕರಣಗಳಾಗಿವೆ ಎಂದು ಉಪ ತಹಶೀಲ್ದಾರ್ ಆರ್. ರವಿ ಮಾಹಿತಿ ನೀಡಿದರು.

ಹಾಲಿವಾಣದಲ್ಲಿ  ಪಿಡಿಓ ರಮೇಶ, ಕಂದಾಯ ನಿರೀಕ್ಷಕ ಸಮೀರ್,  ಗ್ರಾಮ ಲೆಕ್ಕಾಧಿಕಾರಿ ರಾಮಕೃಷ್ಣ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆ ಯರು, ಕೆ.ಎನ್. ಹಳ್ಳಿಯಲ್ಲಿ ಪಿಡಿಓ ಪರಮೇಶ್ವರಪ್ಪ, ಗ್ರಾಮ ಲೆಕ್ಕಾಧಿಕಾರಿ ಆನಂದ್ ಮತ್ತು ಕುಂಬಳೂರಿನಲ್ಲಿ ಪಿಡಿಓ ಚಂದ್ರಶೇಖರ್ ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು.

error: Content is protected !!