ಹರಿಹರ : ಬಕ್ರೀದ್ ಶಾಂತಿ ಸಭೆ

ಹರಿಹರ,ಜು.30 – ನಗರದಲ್ಲಿನ ಬಕ್ರೀದ್ ಹಬ್ಬದ ಸಮಯದಲ್ಲಿ ಬಡಾವಣೆಯಲ್ಲಿ ಇರುವ ಮಸೀದಿಯಲ್ಲಿ ಕೇವಲ 50 ವ್ಯಕ್ತಿಗಳು ಮಾತ್ರ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದಕ್ಕೆ ಸರ್ಕಾರ ಅವಕಾಶವನ್ನು ಕಲ್ಪಿಸಿದೆ. ಅದರಂತೆ ಸಮಾಜದ ಬಾಂಧವರು ಕಟ್ಟುನಿಟ್ಟಾಗಿ ಪಾಲಿಸುವಂತೆ ಗ್ರಾಮಾಂತರ ವಿಭಾಗದ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಹೇಳಿದರು.

ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ನಿನ್ನೆ ನಡೆದ ಬಕ್ರೀದ್ ಹಬ್ಬದ ಶಾಂತಿಸ ಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಸ್ಲಿಂ ಸಮುದಾಯದ ಮುಖಂಡರ ಜೊತೆ ಯಲ್ಲಿ ಚರ್ಚೆ ನಡೆಸಿ, ಕೆಲವು ನಿಬಂಧನೆಗಳನ್ನು ಜಾರಿಗೆ ತರಲಾಗಿದೆ. ಅದನ್ನು ಸರಿಯಾಗಿ ಎಲ್ಲರೂ ಪಾಲನೆ ಮಾಡುವುದರಿಂದ ಮುಂದೆ ಯಾವುದೇ ಅನಾಹುತಗಳು ನಡೆಯದಂತೆ ತಡೆಯಲು ಸಾಧ್ಯವಾಗುತ್ತದೆ. ಪ್ರಾರ್ಥನೆ ವೇಳೆ ಅಂತರ  ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸುವುದಕ್ಕೆ ಮುಂದಾಗಬೇಕು. ಸಮುದಾಯ ಭವನ, ಶಾದಿ ಮಹಲ್ ಸಭಾಂಗ ಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನಿರಾಕ ರಿಸಲಾಗಿದೆ ಎಂದು ಅವರು ತಿಳಿಸಿದರು.

ಈ ವೇಳೆ ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಡಿ. ರವಿಕುಮಾರ್, ಎಸ್. ಶೈಲಾಶ್ರೀ ಮಾತನಾಡಿದರು. 

error: Content is protected !!