ಮುರುಘಾ ಶರಣರಿಂದ ಸರಳ ಪೀಠಾರೋಹಣ

ಚಿತ್ರದುರ್ಗ, ಅ. 27- ಇಲ್ಲಿನ  ಮುರುಘಾಮಠದಲ್ಲಿ  ನಡೆಯುತ್ತಿರುವ ಸರಳ ಶರಣ ಸಂಸ್ಕೃತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ ಮನೆ ಮಾಡಿತ್ತು. 

ಡಾ.ಶಿವಮೂರ್ತಿ ಮುರುಘಾ ಶರಣರು ರುದ್ರಾಕ್ಷಿ ಕಿರೀಟಧಾರಣೆ ಮಾಡಿ, ಸರಳವಾಗಿ ಪೀಠಾರೋಹಣ ಮಾಡಿದರು. 

ಶ್ರೀ ಮುರುಘಾ ಮಠದ ಪೀಠಾಧಿಪತಿ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು, ಶ್ರೀಮಠದ ಕರ್ತೃ ಮುರುಗಿ ಶಾಂತವೀರಸ್ವಾಮಿಗಳ ಗದ್ದುಗೆಗೆ ಭಕ್ತಿ ಸಮರ್ಪಿಸಿ, ಚಿನ್ನದ ಕಿರೀಟ, ಇತರೆ ಎಲ್ಲ ಆಭರಣಗಳನ್ನು ಭಕ್ತರ ಕೈಗೆ ನೀಡಿ, ರುದ್ರಾಕ್ಷಿ ಕಿರೀಟ ಧರಿಸಿ, ವಚನ ಕೃತಿಯನ್ನಿಡಿದುಕೊಂಡು ಪೀಠಾರೋಹಣ ಮಾಡಿದರು.  ಈ ಸಂದರ್ಭದಲ್ಲಿ ನಾಡಿನ ವಿವಿಧ ಮಠಾಧೀಶರು, ಹರಗುರು ಚರಮೂರ್ತಿಗಳು, ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಶ್ರೀಮಠದಲ್ಲಿ ಶೂನ್ಯ ಪೀಠಾರೋಹಣ ವೀಕ್ಷಿಸಿದರು. 

ಶ್ರೀಮಠದ ಪ್ರಾಂಗಣದಲ್ಲಿ ಧರ್ಮಗುರು ಬಸವೇಶ್ವರರ ಹಾಗೂ ಶೂನ್ಯಪೀಠದ ಪ್ರಥಮ ಅಧ್ಯಕ್ಷರಾದ ಅಲ್ಲಮಪ್ರಭುದೇವರ ಭಾವಚಿತ್ರ ಹಾಗೂ ಪ್ರಾಚೀನ ಹಸ್ತಪ್ರತಿಗಳ ಮೆರವಣಿಗೆಗೆ ಶ್ರೀಮುರುಘಾ ಶರಣರು ಚಾಲನೆ ನೀಡಿದರು. ಶ್ರೀಮಠದ ಆವರಣದಲ್ಲಿ ಶರಣರ, ಹರ ಗುರು ಚರಮೂರ್ತಿಗಳ ಹಾಗೂ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯು  ನೆರವೇರಿತು. 

error: Content is protected !!