ಕೂಡ್ಲಿಗಿ, ಅ.26- ಕೋವಿಡ್ ಸಂದರ್ಭದಲ್ಲಿ ಹಬ್ಬದ ಆಚರಣೆ ಯನ್ನು ಆರೋಗ್ಯ ದೃಷ್ಟಿ ಇಟ್ಟು ಕೊಂಡು ಸರ್ಕಾರದ ಸುತ್ತೋಲೆ ಯಂತೆ ನಡೆಸುವುದು ಉತ್ತಮ ಎಂದು ಪೊಲೀಸ್ ವೃತ್ತಾಧಿಕಾರಿ ಪಂಪನಗೌಡ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ದಸರಾ ಹಾಗೂ ಈದ್ ಮಿಲಾದ್ ಹಬ್ಬದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾ ಮಾರಿ ಕೊರೊನಾ ನಿಯಂತ್ರಣಕ್ಕೆ ನಾವೆಲ್ಲರೂ ಮುಂದಾಗಬೇಕಾಗಿದೆ. ಎಲ್ಲರ ಆರೋಗ್ಯ ಕಾಪಾಡಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂ ಡಿದೆ ಎಂದು ಅವರು ಹೇಳಿದರು.
ಮುಸ್ಲಿಂ ಮುಖಂಡರಾದ ಮಾದಿಹಳ್ಳಿ ನಜೀರ್, ಸೈಫುಲ್ ಖಾನ್, ಶುಕೂರ್ ಇತರರು ಕೂಡ್ಲಿಗಿ ಪಟ್ಟಣದಲ್ಲಿ ಈದ್ ಮಿಲಾದ್ ಆಚರಣೆ ಮಾಡುವುದಿಲ್ಲವೆಂದು ತಿಳಿಸಿದರು. ಪಿಎಸ್ಐ ತಿಮ್ಮಣ್ಣ ಚಾಮನೂರ್ ಸರ್ಕಾರದ ಸುತ್ತೋಲೆ ಓದಿ ಸಭಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಕಾವಲ್ಲಿ ಶಿವಪ್ಪ ನಾಯಕ, ಸಿರಿಬಿ ಮಂಜುನಾಥ್, ಕಲ್ಚಾಟ್ಟಿ ಈಶಪ್ಪ, ಚಂದ್ರು ಪಲ್ಲವನವರ್, ಶುಕೂರ್, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಎಸ್. ಸುರೇಶ್, ಗುಪ್ಪಾಲ್ ಕಾರೆಪ್ಪ, ಮಾದಿಹಳ್ಳಿ ನಜೀರ್, ಹೆಚ್.ಎಸ್. ಸೈಫುಲ್ಲಾ ಖಾನ್, ಡಾಣಿ ರಾಘ ವೇಂದ್ರ, ಶಿವಶಂಕರ್, ಅಜೇಯ್ ರಾಮಸಾಲಿ, ಡಿಶ್ ತಿಪ್ಪಣ್ಣ, ನಾಗೇಶ್, ಓಬಳೇಶ್, ಜಿಲಾನ್ ಹಾಗೂ ಇತರರು ಉಪಸ್ಥಿತರಿದ್ದರು.