ಮೋದಿ, ಯಡಿಯೂರಪ್ಪ ಬೆಂಬಲಿಸಿ ರೈತರಿಂದ ಅಭಿನಂದನಾ ಪತ್ರ

ಟ್ರ್ಯಾಕ್ಟರ್ ಓಡಿಸುವ ಮೂಲಕ ನಾಗರಾಜ್ ಲೋಕಿಕೆರೆ ಅವರಿಂದ ಅಭಿಯಾನಕ್ಕೆ ಚಾಲನೆ

ದಾವಣಗೆರೆ, ಅ.24- ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯಿದೆ ತಿದ್ದುಪಡಿ ಮೂಲಕ ರೈತರಿಗೆ ಅನುಕೂಲ ಮಾಡಿಕೊ ಟ್ಟಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಾರ್ಯವನ್ನು ಬೆಂಬಲಿಸಿ, ಪ್ರತಿ ಹಳ್ಳಿಯಿಂದ 100 ರೈತರು ಅಭಿನಂದನಾ ಪತ್ರ ಬರೆದು ಕಳುಹಿಸಲಿದ್ದಾರೆ ಎಂದು ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ ತಿಳಿಸಿದ್ದಾರೆ.

ನಿನ್ನೆ ಇಲ್ಲಿ ಏರ್ಪಾಡಾಗಿದ್ದ ಜಿಲ್ಲಾ ರೈತ ಮೋರ್ಚಾ ಪದಾಧಿಕಾರಿಗಳ ಸಭೆಯ ನಂತರ ಪತ್ರ ಅಭಿಯಾನಕ್ಕೆ ಟ್ರ್ಯಾಕ್ಟರ್ ಓಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ರೈತರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರೈತರಿಗೆ ಸಂಬಂಧಿಸಿದ ಎಪಿಎಂಸಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಕಾಂಗ್ರೆಸ್ ವಿರೋಧ ಮಾಡುತ್ತಾ, ರೈತರನ್ನು ಹಾದಿ ತಪ್ಪಿಸುತ್ತಿದೆ. ಪ್ರತಿ ಪಕ್ಷಗಳಿಗೆ ಟೀಕೆ ಮಾಡುವುದು ಬಿಟ್ಟರೆ ಬೇರೆ ಕೆಲಸ ಇಲ್ಲ ಎಂದು ಹರಿಹಾಯ್ದ ಅವರು, ಈ ಕಾರ್ಯಗಳಿಗೆ ರೈತರಿಂದಲೇ ಅಭಿನಂದನಾ ಪತ್ರ ಬರೆಸಲಾಗುವುದು ಎಂದರು.

ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ದ್ಯಾಮನಗೌಡ, ಬಿ.ಜೆ.ಧನಂಜಯ, ಅಜ್ಜಣ್ಣ, ವೀರೇಶ್, ಪ್ರಧಾನ ಕಾರ್ಯದರ್ಶಿ ಕೆ.ಹೆಚ್.ನಾಗನಗೌಡ, ಕಾರ್ಯದರ್ಶಿ ಹರ್ಷ ಪಟೇಲ್, ಎ.ಎಂ.ಶಿವಪ್ರಕಾಶ್, ಹೆಚ್.ಬಿ.ಮಂಜುನಾಥ್ ಇತರರಿದ್ದರು.

error: Content is protected !!