ಮುಂದುವರೆದ ದಲ್ಲಾಲರ ಅನಿರ್ದಿಷ್ಟ ಮುಷ್ಕರ

ದಾವಣಗೆರೆ, ಜು.21- ನಗರದ ಎಪಿಎಂಸಿ ದಲ್ಲಾಲರು ಎಪಿಎಂಸಿಯ  ದಲ್ಲಾಲರ ಸಂಘದ ನೇತೃತ್ವದಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳದೇ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನವಾದ ಇಂದೂ ಸಹ ಮುಂದುವರೆದಿದ್ದು, ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದ ಒಳ ಹಾಗೂ ಹೊರಗೆ ಏಕ ರೂಪದ ಮಾರುಕಟ್ಟೆ ಶುಲ್ಕವನ್ನು ಜಾರಿಗೆ ತರುವಂತೆ ಆಗ್ರಹಿಸಿದ್ದಾರೆ.

ಎಪಿಎಂಸಿ ಪ್ರಾಂಗಣದ ಹೊರಗೆ ಕೃಷಿ ಉತ್ಪನ್ನ ವ್ಯವಹಾರ ಮಾಡುವವರಿಗೆ ಎಪಿಎಂಸಿ ಶುಲ್ಕ ಇರುವುದಿಲ್ಲ ಎನ್ನುವ ಅಂಶ ನ್ಯಾಯಯುತವಾಗಿ ವ್ಯವಹಾರ ನಡೆಸುವ ನಮಗೆ ನಿರಾಸೆ ಮೂಡಿಸಿದೆ. ಕಾನೂನು ನಿಯಮಗಳು ಎಲ್ಲರಿಗೂ ಒಂದೇ ಇರಬೇಕು ಎನ್ನುವುದು ಸಂವಿಧಾನ ಬದ್ದವಾಗಿರುತ್ತದೆ. 

ಪ್ರಾಂಗಣದಲ್ಲಿನ ವರ್ತಕರು ಪ್ರಾಂಗಣದ ಹೊರಗಿನ ವರ್ತಕರೊಂದಿಗೆ ಪೈಪೋಟಿ ನಡೆಸಲಾಗದೇ ವಹಿವಾಟು ಸ್ಥಗಿತಗೊಳಿಸುವ ಸ್ಥಿತಿ ಬಂದಿದೆ ಎಂದು ದಲ್ಲಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದಲ್ಲಾಲರ ಸಂಘದ ಅಧ್ಯಕ್ಷ ಜಿ.ಎಸ್.ಪರಮೇಶ್ವರ ಗೌಡ್ರು, ಕಾರ್ಯದರ್ಶಿ  ಬಿ.ಎನ್.ಟಿ. ಸದಾನಂದ ಅವರುಗಳು ಮುಷ್ಕರದ ನೇತೃತ್ವ ವಹಿಸಿದ್ದಾರೆ. 

error: Content is protected !!