ಹರಪನಹಳ್ಳಿಯಲ್ಲಿ ಶಾಸಕ ಜಿ. ಕರುಣಾಕರ ರೆಡ್ಡಿ
ಹರಪನಹಳ್ಳಿ, ಜು.20- ದಾವಣಗೆರೆ ವಿಶ್ವವಿದ್ಯಾಲಯದಿಂದ ಬಳ್ಳಾರಿ ಕೃಷ್ಣದೇವರಾಯ ವಿವಿ ವ್ಯಾಪ್ತಿಗೆ ಒಳಪಡಲು ಕಡತ ವಿಲೇವಾರಿಗಳು ನಡೆಯುತ್ತಿವೆ. ಜಿಲ್ಲೆಗೆ ಸೇರ್ಪಡೆ ಆದ ಬಳಿಕ ಕಾಲೇಜಿನಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗುತ್ತವೆ ಎಂದು ಶಾಸಕ ಜಿ.ಕರುಣಾಕರ ರೆಡ್ಡಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ ನಲ್ಲಿ ಮೊನ್ನೆ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಇದು ವರೆಗೂ ಒಟ್ಟು 8 ಕೋಟಿ ರೂ. ಮಂಜೂರಾ ಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯ ಲ್ಲಿವೆ. ತಂತ್ರಜ್ಞಾನದ ಯುಗದಲ್ಲಿ ಕಂಪ್ಯೂಟರ್ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರದಿಂದ ನೀಡುವ ಉಚಿತ ಲ್ಯಾಪ್‌ಟಾಪನ್ನು ಪದವಿ ವಿದ್ಯಾ ರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಸಾಸ್ವಿಹಳ್ಳಿಯಲ್ಲಿ ಒಬ್ಬ ಬಡ ವಿದ್ಯಾರ್ಥಿ ಶುಲ್ಕವಿಲ್ಲದೇ ಅಳಲು ತೋಡಿಕೊಂಡಿದ್ದ. ಆತನ ಶುಲ್ಕವನ್ನು ನಾನು ಕಟ್ಟಿ ಓದಲು ನೆರವಾದೆ, ಫಲಿತಾಂಶ ಶೇ.90 ರಷ್ಟಾಗಿದೆ. ಅಂತಹ ವಿದ್ಯಾ ರ್ಥಿಗಳಿದ್ದರೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು.
ಕಾಲೇಜಿಗೆ ಸುಮಾರು 610 ಲ್ಯಾಪ್‌ಟಾಪ್ ಗಳು ಬಂದಿದ್ದು, 10 ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ.ಎಸ್.ಷಣ್ಮುಖಗೌಡ ಮಾತನಾಡಿ, ಕಾಲೇಜಿನ ಬಿ.ಎ., ಬಿ.ಎಸ್ಸಿ, ಬಿ.ಕಾಂನ ಒಟ್ಟು 610 ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಹಂತ ಹಂತವಾಗಿ ಶೀಘ್ರ ಲ್ಯಾಪ್‌ಟಾಪ್ ವಿತರಿಸುವುದಾಗಿ ಮಾಹಿತಿ ನೀಡಿದರು.
ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮಂಜ್ಯಾನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ನಿಟ್ಟೂರು ಸಣ್ಣಹಾಲಪ್ಪ, ಪುರಸಭೆ ಸದಸ್ಯ ಜಾವೀದ್, ಪ್ರಾಧ್ಯಾಪಕರಾದ ಎನ್.ಎಂ.ನಾಗರಾಜ್, ವಿಜಯಕುಮಾರ್, ಡಾ.ಭೀಮಪ್ಪ, ಹುಚ್ಚರಾಯಪ್ಪ, ಗಿರೀಶ್, ಬಸವರಾಜ್, ಹಳೆಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ರವಿನಾಯ್ಕ, ಮುಖಂಡರಾದ ಆರ್.ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.