ಮಲೇಬೆನ್ನೂರಿನಲ್ಲಿ ಆಶಾ ಕಾರ್ಯಕರ್ತೆಗೆ ಸೋಂಕು

ಮಲೇಬೆನ್ನೂರು, ಜು.20- ಪಟ್ಟಣದಲ್ಲಿ ಸೋಮವಾರ ಕೊರೊನಾ ವಾರಿಯರ್ಸ್‌ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಇಲ್ಲಿನ ಇಂದಿರಾನಗರದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ 36 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರು 14 ನೇ ವಾರ್ಡಿನ ಗೌಸ್ ನಗರದ ಮುಖ್ಯ ರಸ್ತೆಯಲ್ಲಿ ವಾಸವಾಗಿದ್ದರು. ಅನಾರೋಗ್ಯದಿಂದಾಗಿ ಚಿಕಿತ್ಸೆಯಲ್ಲಿದ್ದ ಈ ಮಹಿಳೆ, ಕಳೆದ 10 ದಿನಗಳಿಂದ ಕರ್ತವ್ಯಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ. 5 ದಿನಗಳ ಹಿಂದೆ ಇವರ ಗಂಟಲು ದ್ರವವನ್ನು ಪರೀಕ್ಷೆ ಮಾಡಲಾಗಿತ್ತು. ಪರೀಕ್ಷಾ ವರದಿ ಸೋಮವಾರ ಬೆಳಿಗ್ಗೆ ಪಾಸಿಟಿವ್ ಬಂದ್ ತಕ್ಷಣ, ಮಹಿಳೆಯನ್ನು ದಾವಣಗೆರೆಯ ಸಿ.ಜಿ.ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.

ಪತಿ, ಮಕ್ಕಳು ಸೇರಿದಂತೆ ಮನೆಯಲ್ಲಿರುವ ನಾಲ್ವರನ್ನು ಹೋಂ ಕ್ವಾರಂಟೈನ್ ಮಾಡಿದ್ದು, ಮಂಗಳವಾರ ಕೊರೊನಾ ಟೆಸ್ಟ್ ಮಾಡಲಾಗುವುದೆಂದು ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ತಿಳಿಸಿದ್ದಾರೆ.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪತಹಶೀಲ್ದಾರ್ ಆರ್.ರವಿ, ಪುರಸಭೆ ಸದಸ್ಯ ಎ.ಆರೀಫ್ ಅಲಿ, ಭೋವಿಕುಮಾರ್, ಪುರಸಭೆ ಅಧಿಕಾರಿಗಳಾದ ಗುರುಪ್ರಸಾದ್, ಆರ್.ಎಸ್.ಉಮೇಶ್, ನವೀನ್, ದಿನಕರ್, ಗಣೇಶ್, ಪ್ರಭು, ಇಮ್ರಾನ್ ಹಾಗೂ ಪೌರ ಕಾರ್ಮಿಕರು ಹಾಜರಿದ್ದು, ಸೋಂಕಿತರ ಮನೆಯ ಏರಿಯಾವನ್ನು ಸೀಲ್‌ಡೌನ್ ಮಾಡಿ, ಜನರಿಗೆ ಜಾಗೃತಿ ಮೂಡಿಸಿದರು. ಅಲ್ಲದೇ ಗೌಸ್ ನಗರವನ್ನು ಸ್ಯಾನಿಟೈಸ್ ಮಾಡಿಸಿದರು.

error: Content is protected !!