ರಾಣೇಬೆನ್ನೂರು, ಜು. 19- ಕೊರೊನಾ ತಡೆಗಾಗಿ ರಾಜ್ಯ ಸರ್ಕಾರ ಜಾರಿಗೊಳಿಸಿದ ಸಂಡೆ ಕರ್ಫ್ಯೂ ಯಶಸ್ವಿಯಾಗಿದೆ.
ಕರ್ಫ್ಯೂ ಅಂಗವಾಗಿ ಬೆಳಗ್ಗೆಯಿಂದಲೇ ಪ್ರಮುಖ ಮಾರುಕಟ್ಟೆ ಪ್ರದೇಶಗಳು ಸೇರಿದಂತೆ ನಗರದ ಎಲ್ಲಾ ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳಿಗೆ ಬಾಗಿಲು ಹಾಕಲಾಗಿತ್ತು. ಕೇವಲ ಔಷಧಿ ಅಂಗಡಿಗಳು ಹಾಗೂ ಪೆಟ್ರೊಲ್ ಬಂಕ್‌ಗಳು ಮಾತ್ರ ಬಾಗಿಲು ತೆರೆದಿದ್ದವು.
ಕರ್ಫ್ಯೂ ಸಮಯದಲ್ಲಿ ಅನಗತ್ಯವಾಗಿ ಬೈಕ್‌ಗಳಲ್ಲಿ ಸಂಚರಿಸುವವರ ನಿಯಂತ್ರಣಕ್ಕಾಗಿ ಪೊಲೀಸರು ಈ ಬಾರಿ ಲಾಠಿ ಪ್ರಹಾರ ನಡೆಸಿದರು. ಈ ಅವಧಿಯನ್ನು ಸದ್ಬಳಕೆ ಮಾಡುವ ಚಿಂತನೆಯಿಂದ ಸ್ಥಳೀಯ ಶಾಸಕ ಅರುಣಕುಮಾರ ಪೂಜಾರ ಮಾರುಕಟ್ಟೆ ಪ್ರದೇಶಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಶಾಸಕರ ಸಲಹೆಯಂತೆ ನಗರಸಭೆ ಸಿಬ್ಬಂದಿ ದುರ್ಗಾ ತರಕಾರಿ ಮಾರುಕಟ್ಟೆ, ನೆಹರು ಮಾರುಕಟ್ಟೆ ಹಾಗೂ ಬೆಣ್ಣೆ ಮಾರುಕಟ್ಟೆ ಪ್ರದೇಶ ಗಳನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಿದರು.