ತುಳಜಾ ಭವಾನಿ ದೇವಸ್ಥಾನದಲ್ಲಿ ಇಂದು ದಸರಾ ಉತ್ಸವ
ಕೆಟಿಜೆ ನಗರ 11ನೇ ಕ್ರಾಸ್ ನಲ್ಲಿರುವ ಶ್ರೀ ತುಳಜಾ ಭವಾನಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು, ಇದೇ ದಿನಾಂಕ 26ರವರೆಗೆ ಜರುಗಲಿದೆ. ಪ್ರತಿದಿನ ಶ್ರೀ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಲಿವೆ. ದಸರಾ ಹಬ್ಬದ ಅಂಗವಾಗಿ ಇದೇ ದಿನಾಂಕ 23ರ ಶುಕ್ರವಾರ ಚಂಡಿಕಾ ಹೋಮ ನಡೆಯಲಿದೆ.
ನಗರದ ಕಾಳಿಕಾದೇವಿ ದೇವಸ್ಥಾನದಲ್ಲಿ ದಸರಾ ಮಹೋತ್ಸವ
ಶ್ರೀ ಕಾಳಿಕಾದೇವಿ ರಸ್ತೆಯಲ್ಲಿರುವ ಶ್ರೀ ಕಾಳಿಕಾ ದೇವಿ ವಿಶ್ವಕರ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವ ಆರಂಭಗೊಂಡಿದ್ದು, ಇದೇ ದಿನಾಂಕ 26ರವರೆಗೆ ನಡೆಯಲಿದೆ. ಪ್ರತಿದಿನ ಶ್ರೀ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ದುಗ್ಗಮ್ಮ ದೇವಸ್ಥಾನದಲ್ಲಿ ಇಂದು ಗಜ ವಾಹನ ಅಲಂಕಾರ
ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದಲ್ಲಿ ಇಂದಿನ ನವರಾತ್ರಿ ಉತ್ಸವದಲ್ಲಿ ಶ್ರೀ ದೇವಿಗೆ ಗಜ ವಾಹನ ಅಲಂಕಾರ ಮಾಡಲಾಗುತ್ತದೆ. ನಾಳೆ ವೀಣಾ ವಾಹನ ಅಲಂಕಾರ ಇರುತ್ತದೆ. ಪ್ರತಿದಿನ ವಿಶೇಷ ಅಲಂಕಾರ, ಅಭಿಷೇಕ, ಪೂಜೆಗಳು ಜರುಗಲಿವೆ.