ದಾವಣಗೆರೆ, ಅ.18- ನಗರದ ಸರ್ ಎಂ.ವಿ ಕಾಲೇಜಿನ ವಿದ್ಯಾರ್ಥಿನಿ ಕು|| ಎಸ್.ಅನುಷಾ ಅವರು ವೈದ್ಯಕೀಯ ಪ್ರವೇಶಕ್ಕಾಗಿ ನಡೆಸುವ ನೀಟ್ ಪರೀಕ್ಷೆಯಲ್ಲಿ 720ಕ್ಕೆ 666 ಅಂಕಗಳನ್ನು ಪಡೆದು 99.88 ಶೇಕಡವಾರು ಗಳಿಸಿ, ಅತ್ಯುತ್ತಮ ಫಲಿತಾಂಶ ಪಡೆದಿದ್ದಾರೆ.
ಅನುಷಾ, ಪಿಯುಸಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರು. ತರಳಬಾಳು ಸೆಂಟ್ರಲ್ ಸ್ಕೂಲ್ ನಲ್ಲಿ ಎಸ್ಸೆಸ್ಸೆಲ್ಸಿಯಲ್ಲೂ ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರಿಂದ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಜೆಇಇ, ಸಿಇಟಿ ಪರೀಕ್ಷೆಗಳಲ್ಲೂ ಅತ್ಯುತ್ತಮ ರಾಂಕ್ ಪಡೆದಿದ್ದಾರೆ.
ಅನುಷಾ, ಕಾಕನೂರಿನ ಶಿಕ್ಷಕರಾಗಿದ್ದ ದಿ. ಎಂ.ಬಿ.ಶಂಕರಮೂರ್ತಿ ಹಾಗೂ ಹಿರಿಯ ಸಾಹಿತಿ – ಶಿಕ್ಷಕಿ ಶ್ರೀಮತಿ ಎ.ಸಿ.ಶಶಿಕಲಾ ಶಂಕರಮೂರ್ತಿ ದಂಪತಿ ಪುತ್ರಿ.
ಮಗಳ ಸಾಧನೆ ತೃಪ್ತಿ ನೀಡಿದೆ. ಸರ್. ಎಂ.ವಿ ಕಾಲೇಜಿನ ಆಡಳಿತ ಮಂಡಳಿ ಮತ್ತು ಉಪನ್ಯಾಸಕ ವೃಂದ ಉತ್ತಮ ಮಾರ್ಗದರ್ಶನ, ತರಬೇತಿ ನೀಡಿ ಶ್ರೇಷ್ಟ ಮಟ್ಟದ ಬೋಧನೆ ಜೊತೆಗೆ, ವಿದ್ಯಾರ್ಥಿಗಳ ಬಗ್ಗೆ ತುಂಬು ಕಾಳಜಿ ವಹಿಸುತ್ತಿದ್ದುದು ಉತ್ತಮ ಫಲಿತಾಂಶಕ್ಕೆ ನಾಂದಿಯಾಯಿತು ಎಂದು ಶಶಿಕಲಾ ಶಂಕರಮೂರ್ತಿ ಕೃತಜ್ಞತೆ ಸಲ್ಲಿಸಿದ್ದಾರೆ.