ಕೂಡ್ಲಿಗಿ, ಅ.15 – ಪಟ್ಟಣದ 10ನೇ ವಾರ್ಡ್ನಲ್ಲಿ ನಿನ್ನೆ ಮಧ್ಯಾಹ್ನ ವಾಲ್ಮೀಕಿ ಮುಖಂಡ ಕಡ್ಡಿ ಮಂಜುನಾಥ ಅವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮನೆಗೆ ಬೀಗ ಹಾಕಿದ್ದ ಸಂದರ್ಭದಲ್ಲಿ ಮನೆಯೊಳಗೆ ಅಗ್ನಿ ತನ್ನ ಕೆನ್ನಾಲಿಗೆ ಚಾಚಿದ ಪರಿಣಾಮ ದವಸ ಧಾನ್ಯಗಳು, 50 ಸಾವಿರ ರೂ. ನಗದು, ದುಬಾರಿ ವಡವೆ ವಸ್ತ್ರಗಳು ಹಾಗೂ ಟಿವಿ, ಫ್ರೀಜ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಸಾಮಗ್ರಿಗಳು, ಬೆಲೆ ಬಾಳುವ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಹಾಗೂ ಜೆಸ್ಕಾಂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ.
January 10, 2025